ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹19 ಲಕ್ಷ ಮೌಲ್ಯದ ಚಿನ್ನ ವಶ

Last Updated 20 ಫೆಬ್ರುವರಿ 2021, 5:35 IST
ಅಕ್ಷರ ಗಾತ್ರ

ಮಂಗಳೂರು: ದುಬೈನಿಂದ ಬಂದಿಳಿದ ಪ್ರಯಾಣಿಕನಿಂದ ₹19.01 ಲಕ್ಷ ಮೌಲ್ಯದ 402 ಗ್ರಾಂ ಚಿನ್ನವನ್ನು ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಕಾಸರಗೋಡಿನ ಶೇಖ್‌ ಹನೀಫ್‌ ಎಂಬಾತ ಏರ್‌ ಇಂಡಿಯಾ ವಿಮಾನದಲ್ಲಿ ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ. ಟ್ರಾಲಿ ಬ್ಯಾಗ್‌ನ ಗಾಲಿಗಳು ಹಾಗೂ ವ್ಯಾಕ್ಯೂಮ್‌ ಕ್ಲೀನರ್‌ನ ಮೋಟಾರ್ ಪ್ಲೇಟ್‌ಗಳಲ್ಲಿ ಚಿನ್ನವನ್ನು ಅಡಗಿಸಿ ಇಟ್ಟಿರುವುದು ಪತ್ತೆಯಾಗಿದೆ.

ಕಸ್ಟಮ್ಸ್‌ ಉಪ ಆಯುಕ್ತ ಡಾ.ಕಪಿಲ್‌ ಗಡೆ ನೇತೃತ್ವದಲ್ಲಿ ಅಧೀಕ್ಷಕರಾದ ನಾಗೇಶ್‌ಕುಮಾರ್‌, ಭೂಮ್ಕರ್‌, ವಿರಾಗ್ ಶುಕ್ಲ ಅವರನ್ನು ಒಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT