ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಜೀವನದ ಸಾರ್ಥಕ ದಿನ: ಮೇಯರ್ ದಿವಾಕರ್

Last Updated 9 ಜುಲೈ 2020, 17:00 IST
ಅಕ್ಷರ ಗಾತ್ರ

ಮಂಗಳೂರು: ‘ಜೀವಮಾನವಿಡೀ ಸಮಾಜಸೇವೆ, ಕಲಾಸೇವೆ, ಸಾಹಿತ್ಯ, ದೈವಾರಾಧನೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಎಲೆಮರೆಯ ಕಾಯಿಯಂತೆ ಸೇವೆ ಮಾಡುತ್ತಿರುವ ಸಾಧಕರನ್ನು ಗುರುತಿಸಿ ಗುರುಪೂರ್ಣಿಮೆಯ ಅಂಗವಾಗಿ ಗೌರವಿಸುವ ಪುಣ್ಯದ ಕೆಲಸ ನನ್ನ ಜೀವನದ ಸಾರ್ಥಕ ದಿನ’ ಎಂದು ಮೇಯರ್‌ ದಿವಾಕರ ಪಾಂಡೇಶ್ವರ ಹೇಳಿದರು.

ಸಂಸ್ಕಾರ ಭಾರತಿ ಮಂಗಳೂರು ಆಶ್ರಯದಲ್ಲಿ ಗುರುಪೂರ್ಣಿಮೆಯ ಅಂಗವಾಗಿ 5 ಜನ ಕಲಾಸಾಧಕರಿಗೆ ನಿಟ್ಟೆ ಸಂಸ್ಥೆ ನೀಡುವ ಗೌರವಧನದೊಂದಿಗೆ ಕಲಾವಿದರ ಮನೆಗೆ ತೆರಳಿ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತುಕಾರಾಂ ಬಂಗೇರ ಬೊಕ್ಕಪಟ್ನ (ಸಮಾಜ ಸೇವೆ), ಶ್ರೀಧರ ಶೆಟ್ಟಿ ಮೂಡುಬಿದಿರೆ (ದೈವಾರಾಧನೆ), ಗಣೇಶ್ ಕೊಲಕಾಡಿ (ಸಾಹಿತ್ಯ), ಜಿ. ನಾರಾಯಣ ಶೆಟ್ಟಿ ಗುರುಪುರ (ನಾಟಕ), ಕೈರಂಗಳ ನಾರಾಯಣ ಹೊಳ್ಳ (ಯಕ್ಷಗಾನ) ಅವರಿಗೆ ಗುರುವಂದನಾ ಕಾರ್ಯಕ್ರಮ ನೆರವೇರಿತು. ಗುರುಪೂರ್ಣಿಮೆಯ ಮಹತ್ವವನ್ನು ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್‌ ಹೇಳಿದರು.

ಸಂಸ್ಕಾರ ಭಾರತಿಯ ಮಂಗಳೂರು ಘಟಕದ ಅಧ್ಯಕ್ಷ ಪುರುಷೋತ್ತಮ ಭಂಡಾರಿ ಸ್ವಾಗತಿಸಿದರು. ರಾಜ್ಯ ಘಟಕದ ಉಪಾಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಘಟಕದ ಕಾರ್ಯದರ್ಶಿ ನಾಗರಾಜ್ ಶೆಟ್ಟಿ, ಮಂಗಳೂರು ಘಟಕದ ಉಪಾಧ್ಯಕ್ಷ ಧನಪಾಲ್ ಶೆಟ್ಟಿಗಾರ್, ಪ್ರಧಾನ ಕಾರ್ಯದರ್ಶಿ ಮಾಧವ ಭಂಡಾರಿ, ಕೋಶಾಧಿಕಾರಿ ರಘುವೀರ್ ಗಟ್ಟಿ, ಸಂಘಟನಾ ಕಾರ್ಯದರ್ಶಿ ಗಣೇಶ್ ಕುಮಾರ್ ಬೋಳೂರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯೆ ಶಾರದಾಮಣಿ ಶೇಖರ್, ನೃತ್ಯ ಗುರು ಶ್ರೀಲತಾ ನಾಗರಾಜ್, ಜತೆ ಕಾರ್ಯದರ್ಶಿ ಕಿರಣ್ ಕುಮಾರ್, ಲಯನ್ಸ್ ಕ್ಲಬ್ ಮೆಟ್ರೋ ಗೋಲ್ಡ್ ಅಧ್ಯಕ್ಷ ಹರಿಪ್ರಸಾದ್ ರೈ, ಹರ್ಷಿತ್ ಕೊಟ್ಟಾರಿ, ಶ್ರೀಪತಿ ಆಚಾರ್, ಮಾಧ್ಯಮ ಪ್ರಮುಖ್ ಸುಜೀರ್ ವಿನೋದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT