ಸಿಯೋನ್ ಆಶ್ರಮದ ಆಡಳಿ ನಿರ್ದೇಶಕ ಯು.ಸಿ.ಪೌಲೊಸ್ ಮಾತನಾಡಿ, ‘ಸುಮಾರು 387 ಮಂದಿ ಮಾನಸಿಕ ಮತ್ತು ಅಂಗವಿಕಲರು ಸೇರಿದಂತೆ ನಿರಾಶ್ರಿತರಿಗೆ ಸಿಯೋನ್ ಆಶ್ರಮ ಉಚಿತ ಸೇವೆ ನೀಡುತ್ತಿದೆ. ಬಂಟ್ವಾಳದ ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ ₹ 1 ಲಕ್ಷ ಮೌಲ್ಯದ ಅಕ್ಕಿ ಸಹಿತ ತೊಗರಿಬೇಳೆ, ಹೆಸರು ಬೇಳೆ, ಕಡ್ಲೆ ಬೇಳೆ, ಉದ್ದಿನ ಬೇಳೆ, ಕೊತ್ತಂಬರಿ, ಮೆಣಸು, ಎಣ್ಣೆ, ಸಾಬೂನು, ಟೂತ್ ಪೇಸ್ಟ್ ಒದಗಿಸಿ ಮಾದರಿಯಾಗಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.