ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಂ‌ಗ್ಯೋ ಐಸ್‌ಕ್ರೀಂ ಬಿಗ್‌ಬಾಸ್ 11ಕ್ಕೆ ಬ್ರ್ಯಾಂಡ್‌ ಅಸೋಸಿಯೇಟ್ ಪಾಲುದಾರ

Published : 1 ಅಕ್ಟೋಬರ್ 2024, 13:00 IST
Last Updated : 1 ಅಕ್ಟೋಬರ್ 2024, 13:00 IST
ಫಾಲೋ ಮಾಡಿ
Comments

ಮಂಗಳೂರು: ಪ್ರಸ್ತುತ ಐಸ್‌ಕ್ರೀಮ್ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ಹಾಂಗ್ಯೋ ಐಸ್‌ಕ್ರೀಂ, ಸೆ.29ರಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಸಾರಥ್ಯದಲ್ಲಿ ಪ್ರಾರಂಭವಾಗಿರುವ ‘ಬಿಗ್‌ಬಾಸ್ ಕನ್ನಡ ಸೀಸನ್ 11’ಕ್ಕೆ ಬ್ರ್ಯಾಂಡ್‌ ಅಸೋಸಿಯೇಟ್ ಪಾಲುದಾರರಾಗಿ ಹೆಮ್ಮೆಯಿಂದ ಗುರುತಿಸಿಕೊಳ್ಳಲಿದೆ.

ಈ ಜನಪ್ರಿಯ ರಿಯಾಲಿಟಿ ಟೆಲಿವಿಷನ್ ಷೋದ ಉತ್ಸಾಹಕ್ಕೆ ಐಸ್‌ಕ್ರೀಂನ ಸ್ವಾದವನ್ನು ಸೇರಿಸಿ, ಮನರಂಜನೆಯನ್ನು ಇಮ್ಮಡಿಗೊಳಿಸುವ ಉದ್ದೇಶದೊಂದಿಗೆ, ಹಾಂಗ್ಯೋ ಈ ಸಹಭಾಗಿತ್ವವನ್ನು ಆರಂಭಿಸಿದೆ. ಇದು ಹಾಂಗ್ಯೋ ಕಂಪನಿಗೆ ಹೊಸ ಮೈಲಿಗಲ್ಲು. ಏಕೆಂದರೆ ಕಳೆದ ವರ್ಷ ಐಪಿಎಲ್ 2024ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಧಿಕೃತ ಐಸ್‌ಕ್ರೀಂ ಪಾಲುದಾರನಾಗಿ ಯಶಸ್ಸಿನ ಮೆಟ್ಟಿಲೇರಿದ್ದ ಹಾಂಗ್ಯೋ, ಇಂದು ಮನರಂಜನಾ ಲೋಕದ ಕ್ಷೇತ್ರದಲ್ಲಿ ತನ್ನ ಮೊದಲ ಹೆಜ್ಜೆಯನ್ನು ಇಡುತ್ತಿದೆ.

ಮೊಟ್ಟ ಮೊದಲಬಾರಿಗೆ, ಹಾಂಗ್ಯೋ ಐಸ್‌ಕ್ರೀಂ ನೇರವಾಗಿ ಬಿಗ್‌ಬಾಸ್ ಮನೆಯಲ್ಲಿ ಪ್ರತ್ಯಕ್ಷವಾಗಲಿದೆ. ವಿಶೇಷವಾಗಿ ವಿನ್ಯಾಸಗೊಳಿಸಿದ ಹಾಂಗ್ಯೋ ಐಸ್‌ಕ್ರೀಂನ ಫ್ರೀಜರನ್ನು ಬಿಗ್‌ಬಾಸ್ ಮನೆಯೊಳಗೆ ಇಡಲಾಗುತ್ತಿದೆ. ಸ್ಪರ್ಧಾರ್ಥಿಗಳು ಜಯಗಳಿಸುವಾಗ ಅಥವಾ ಸವಾಲುಗಳೊಂದಿಗೆ ಮುಖಾಮುಖಿಯಾದಾಗ, ಹಾಂಗ್ಯೋ ಐಸ್‌ಕ್ರೀಂ ಅವರಿಗೆ ಖುಷಿ ಅಥವಾ ಸಾಂತ್ವನ ನೀಡುವ ಸಂಗಾತಿಯಾಗಲಿದೆ.

ಹಾಂಗ್ಯೋ ಐಸ್‌ಕ್ರೀಂ ಎಂದರೆ ಸ್ವಾದ ಮತ್ತು ಸಂತೋಷ. ಈ ಸಹಭಾಗಿತ್ವದ ಮೂಲಕ ನಾವು ಆ ಸಂತೋಷವನ್ನು ಬಿಗ್ ಬಾಸ್ ಮನೆಯಲ್ಲಿ ಹಂಚಲು ಬಯಸುತ್ತೇವೆ ಎಂದು ಹಾಂಗ್ಯೋ ಐಸ್‌ಕ್ರೀಂನ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಪೈ ಹೇಳಿದರು.

ಸ್ಪರ್ಧಾರ್ಥಿಗಳು ನಮ್ಮ ಐಸ್‌ಕ್ರೀಂಗಳನ್ನು ಸವಿಯುವ ಉಲ್ಲಾಸವನ್ನು ಪ್ರೇಕ್ಷಕರು ಮನೆಯಲ್ಲಿಯೇ ಆನಂದಿಸಬೇಕು ಎನ್ನುವುದೇ ನಮ್ಮ ಆಸೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕುರಿತು ಮಾಹಿತಿ ನೀಡಿದ ಹಾಂಗ್ಯೋ ಐಸ್‌ಕ್ರೀಂನ ಸಿಒಒ ದಿನೇಶ್ ಶೆಣೈ, ಬಿಗ್‌ಬಾಸ್ ಕನ್ನಡ ಒಂದು ದೊಡ್ಡ ಮನರಂಜನಾ ವೇದಿಕೆ. ಈ ಸಹಭಾಗಿತ್ವ, ಹಾಂಗ್ಯೋ ಬ್ರ್ಯಾಂಡ್‌ ಅನ್ನು ದೊಡ್ಡಮಟ್ಟದ ಪ್ರೇಕ್ಷಕ ಸಮುದಾಯಕ್ಕೆ ತಲುಪಿಸಲು ಸಹಕಾರಿಯಾಗುತ್ತದೆ. ಕರ್ನಾಟಕ ಮಾತ್ರವಲ್ಲದೆ ಇತರ ರಾಜ್ಯಗಳಲ್ಲಿಯೂ ಹಾಂಗ್ಯೋ ಬ್ರ್ಯಾಂಡ್‌ನ ಹೆಸರನ್ನು ವಿಸ್ತರಿಸಿ, ಬೆಳೆಯಲು ಪೂರಕವಾಗುತ್ತದೆ ಎಂದು ಹೇಳಿದರು.

3 ಮಿಲಿಯನ್ ಜನರ ಅಚ್ಚುಮೆಚ್ಚು

ಮಂಗಳೂರು ಮೂಲದ ಐಸ್‌ಕ್ರೀಂ ಪರಂಪರೆಯ ಮೊದಲಿಗರು. ಸಹೋದರರಾದ ದಿನೇಶ್ ಪೈ ಪ್ರದೀಪ್ ಪೈ ಮತ್ತು ಜಗದೀಶ್ ಪೈ ಅವರಿಂದ 1997ರಲ್ಲಿ ಸ್ಥಾಪಿತವಾದ ಹಾಂಗ್ಯೋ ಇಂದು ಭಾರತದ ಪ್ರಮುಖ ಐಸ್‌ಕ್ರೀಂ ಬ್ಯಾಂಡ್‌ಗಳಲ್ಲಿ ಒಂದಾಗಿದೆ. ಮಂಗಳೂರು ನಗರದಲ್ಲಿ ‘ಸಾಫ್ಟೀ’ ಮೂಲಕ ಆರಂಭವಾದ ಹಾಂಗ್ಯೋ ಇಂದು ಕರ್ನಾಟಕ ಮಹಾರಾಷ್ಟ್ರ ಗೋವಾ ಆಂಧ್ರಪ್ರದೇಶ ತೆಲಂಗಾಣ ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ 30 ಸಾವಿರಕ್ಕೂ ಹೆಚ್ಚು ರೀಟೇಲ್ ಔಟ್‌ಲೆಟ್‌ಗಳನ್ನು ಹೊಂದಿದ್ದು 3 ಮಿಲಿಯನ್ ಗ್ರಾಹಕರ ನೆಚ್ಚಿನ ಐಸ್ ಕ್ರೀಂ ಆಗಿದೆ. ಹಾಂಗ್ಯೋ -ಗ್ರೇಟ್ ಇಂಡಿಯನ್ ಐಸ್‌ಕ್ರೀಂ ಕಾಂಟೆಸ್ಟ್ 2017ರಲ್ಲಿ ಆರು ಪ್ರತಿಷ್ಠಿತ ಪುರಸ್ಕಾರಗಳು ಮತ್ತು ಇತರ ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT