ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣನೂರಿಗೆ ಭಕ್ತರ ಹೊರೆದಿಬ್ಬಣ

Published 18 ಜನವರಿ 2024, 6:00 IST
Last Updated 18 ಜನವರಿ 2024, 6:00 IST
ಅಕ್ಷರ ಗಾತ್ರ

ಮಂಗಳೂರು: ಅಕ್ಕಿ, ಬೇಳೆ ಕಾಳು, ತರಕಾರಿ, ಬೆಲ್ಲ, ಆಹಾರ ಸಾಮಗ್ರಿಗಳನ್ನು ಒಳಗೊಂಡ ಹೊರೆ ದಿಬ್ಬಣವನ್ನು ಅದ್ಧೂರಿಯಾಗಿ ಉಡುಪಿ ಪರ್ಯಾಯಕ್ಕೆ ಕಳುಹಿಸಲಾಯಿತು. 

ಪುತ್ತಿಗೆ ಮಠದ ಪರ್ಯಾಯೋತ್ಸವದ ಅಂಗವಾಗಿ ಮಂಗಳೂರು, ಕಟೀಲು, ಮೂಡುಬಿದಿರೆ ಮತ್ತಿತರ ಕಡೆಗಳಿಂದ ಉಡುಪಿಗೆ ಕಳಿಸುವ ಹೊರೆ ಕಾಣಿಕೆಗೆ ಬುಧವಾರ ನಗರದ ಶರವು ಮಹಾಗಣಪತಿ ದೇವಾಲಯದಲ್ಲಿ ಚಾಲನೆ ನೀಡಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಶರವು ಶಿಲೆ ಶಿಲೆ ಮುಕ್ತೇಸರ ರಾಘವೇಂದ್ರ ಶಾಸ್ತ್ರಿ ಮಾತನಾಡಿ, ‘ಪರ್ಯಾಯಕ್ಕೆ ಶರವು ಕ್ಷೇತ್ರದಿಂದ ಹೊರೆ ಕಾಣಿಕೆ ಸಲ್ಲಿಸುವುದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ಧತಿ. ಭಕ್ತರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ವಿವಿಧ ವಸ್ತುಗಳನ್ನು ಸಲ್ಲಿಸಿದ್ದಾರೆ’ ಎಂದರು.

ಕದ್ರಿ ಕ್ಷೇತ್ರ, ಶರವು ಕ್ಷೇತ್ರ, ಮಂಗಳಾದೇವಿ, ಕಾಳಿಕಾಂಬಾ ವಿನಾಯಕ ಕ್ಷೇತ್ರ, ಮುಖ್ಯಪ್ರಾಣ ದೇವಸ್ಥಾನ, ರಾಘವೇಂದ್ರ ಮಠದ ಸಹಯೋಗದೊಂದಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಸ್ವಸಹಾಯ ಸಂಘಗಳು, ಬ್ರಾಹ್ಮಣ ಮಹಾಸಭಾ, ಎಸ್.ಕೆ.ಡಿ.ಬಿ. ಅಸೋಸಿಯೇಷನ್, ಸುರತ್ಕಲ್ ಹೊಸಬೆಟ್ಟು ರಾಘವೇಂದ್ರ ಮಠ, ಸಮತಾ ಬಳಗ, ಮಹಿಳಾ ಒಕ್ಕೂಟ ಮೊದಲಾದ ಸಂಘಟನೆಗಳ ಸದಸ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡರು.

ಶಾಸಕ ವೇದವ್ಯಾಸ ಕಾಮತ್, ಪ್ರಮುಖರಾದ ರಾಮಕೃಷ್ಣ ರಾವ್, ಸುಮಾ ಪ್ರಸಾದ್, ಚಂದ್ರಶೇಖರ ಮಯ್ಯ, ಜನಾರ್ದನ ಹಂದೆ, ಶಶಿಪ್ರಭಾ ಐತಾಳ್, ಪೂರ್ಣಿಮಾ ಪೇಜಾವರ, ಪ್ರಭಾಕರ ಪೇಜಾವರ, ದಯಾನಂದ ಕಟೀಲ್, ಅಶ್ವತ್ಥಾಮ ರಾವ್, ವಿ. ಕರುಣಾಕರನ್ ಮತ್ತಿತರರು ಇದ್ದರು. ಪ್ರದೀಪ ಕುಮಾರ ಕಲ್ಕೂರ ಸ್ವಾಗತಿಸಿದರು. ಸುಧಾಕರ ರಾವ್ ಪೇಜಾವರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT