ಸೋಮವಾರ, ಮೇ 23, 2022
28 °C

ಹೊರೆ ಕಾಣಿಕೆ ಕೇಂದ್ರ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಹಣಿಯೂರು ಗುತ್ತಿನ ತರವಾಡು ದೈವಸ್ಥಾನದ ಪುನರ್ ಪ್ರತಿಷ್ಠೆ, ನೂತನ ದೈವಸ್ಥಾನ ಮತ್ತು ತರವಾಡು ಮನೆಯ ಗೃಹಪ್ರವೇಶ ಹಾಗೂ ದೈವಗಳ ಧರ್ಮನೇಮೋತ್ಸವ ಮೇ 14ರಿಂದ 18ರವರೆಗೆ ಕೊಡಿಪ್ಪಾಡಿ ಬಳಿಯ ಹಣಿಯೂರಿನಲ್ಲಿ ನಡೆಯಲಿದೆ.

14ರಂದು ನಡೆಯಲಿರುವ ಹೊರೆಕಾಣಿಕೆಯ ಶೋಭಾಯಾತ್ರೆಯ ಪೂರ್ವಭಾವಿಯಾಗಿ ಮಂಗಳೂರು ವಲಯದ ಹೊರೆಕಾಣಿಕೆ ಕೇಂದ್ರವು ಶಕ್ತಿನಗರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಉದ್ಘಾಟನೆಗೊಂಡಿತು. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್‌ ಉದ್ಘಾಟಿಸಿದರು. ಮರೋಳಿ ಸೂರ್ಯನಾರಾಯಣ ದೇವಸ್ಥಾನ ಮೊಕ್ತೇಸರ ಉಮೇಶ್ ರೈ ಮೇಗಿನಮನೆ ಮಾತನಾಡಿದರು. ಹಣಿಯೂರು ಫ್ಯಾಮಿಲಿ ಡೈಟಿಸ್ ಟ್ರಸ್ಟ್ ಪುತ್ತೂರಿನ ಅಧ್ಯಕ್ಷ ಡಾ.ಕೆ.ಸಿ. ನಾಯ್ಕ್, ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯೆಯರಾದ ವನಿತಾ ಪ್ರಸಾದ್, ಶಕೀಲಾ ಕಾವ, ಶಕ್ತಿನಗರ ಗೋಪಾಲಕೃಷ್ಣ ದೇವಸ್ಥಾನದ ಆಡಳಿತಾಧಿಕಾರಿ ಆದೀಶ್, ಸಮಿತಿ ಸದಸ್ಯ ವಿನಯಾನಂದ ಕಾನಡ್ಕ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು