ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲ್ಲಿನ ಕ್ವಾರಿ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ: ಬಿಜೆಪಿ ಯುವಮೋರ್ಚಾ ಅಧ್ಯಕ್ಷ

ದ್ವೇಷ ರಾಜಕೀಯ ಮಾಡುತ್ತಿರುವ ರಕ್ಷಿತ್ ಶಿವರಾಂ: ಆರೋಪ
Published 2 ಜುಲೈ 2024, 14:19 IST
Last Updated 2 ಜುಲೈ 2024, 14:19 IST
ಅಕ್ಷರ ಗಾತ್ರ

ಬೆಳ್ತಂಗಡಿ: ‘ಮೇಲಂತಬೆಟ್ಟುವಿನಲ್ಲಿ ನಡೆದ ಕಲ್ಲಿನ ಕ್ವಾರಿ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಷಡ್ಯಂತ್ರ, ವೈಯಕ್ತಿಕ ದ್ವೇಷದಿಂದ ಪ್ರಕರಣ ದಾಖಲಿಸಿ ಮಾಡದ ತಪ್ಪಿಗೆ ನಾನು ಸುಮಾರು 27 ದಿನ ಶಿಕ್ಷೆ ಅನುಭವಿಸಿದಂತಾಗಿದೆ. ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂದವಿಲ್ಲ’ ಎಂದು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘19 ವರ್ಷಗಳಿಂದ ಸಮಾಜಮುಖಿಯಾಗಿ ಕೆಲಸ ಮಾಡಿಕೊಂಡಿರುವ ನನ್ನನ್ನು ಬಿಜೆಪಿ ಗುರುತಿಸಿ ಯುವ ಮೊರ್ಚಾ ಅಧ್ಯಕ್ಷನ್ನಾಗಿ ಮಾಡಿದೆ. ಆದರೆ, ಕಾಂಗ್ರೆಸ್‌ನ ರಕ್ಷಿತ್ ಶಿವರಾಮ್‌ ಅವರು, ನಾನೊಬ್ಬ ರೌಡಿ ಶೀಟರ್, ಹಫ್ತಾ ವಸೂಲಿ ಮಾಡುವವ ಎಂದಿದ್ದಾರೆ. ನಾನು ತಪ್ಪು ಮಾಡಿದ್ದರೆ ನನಗೆ ಶಿಕ್ಷೆಯಾಗಲಿ. ಇಲ್ಲದಿದ್ದರೆ ಆರೋಪ ಮಾಡಿದವರಿಗೆ ಶಿಕ್ಷೆ ಸಿಗಲಿ. ಜುಲೈ 8ರಂದು ಕಾರಣಿಕ ಶಕ್ತಿ ಮಾರಿಗುಡಿಯಲ್ಲಿ ನಾನು ಪ್ರಾರ್ಥನೆ ಸಲ್ಲಿಸಲಿದ್ದೇನೆ. ಪ್ರಕರಣದಲ್ಲಿ ಭಾಗಿಯಾಗಿದ್ದೇನೆ ಎಂದು ಆರೋಪಿಸಿರುವ ರಕ್ಷಿತ್ ಶಿವರಾಮ್ ಕೂಡ ಬಂದು ಪ್ರಮಾಣ ಮಾಡಲಿ’ ಎಂದರು.

ಕಲ್ಲಿನ ಕ್ವಾರಿ ಪ್ರಕರಣದ ಹಿಂದೆ ಕಾಣದ ಕೈಗಳ ಕೈವಾಡವಿದೆ. ಕಾಂಗ್ರೆಸ್‌ ಮುಖಂಡರು ಒತ್ತಡ ಹಾಕಿ ಬಿಜೆಪಿ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದರು.

ಬಿಜೆಪಿ ಬೆಳ್ತಂಗಡಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ.ಪಾರೆಂಕಿ, ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ವಿನೀತ್ ಕೋಟ್ಯಾನ್ ಸಾವ್ಯ, ಬಿಜೆಪಿ ಯುವಮೋರ್ಚಾ ಪದಾಧಿಕಾರಿಗಳಾದ ಹರೀಶ್ ಗೌಡ ಸಂಭ್ಯೋಳ್ಯ, ಸ್ವಸ್ತಿಕ್ ಗೌಡ ಹಟ್ಟತ್ತೋಡಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT