ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕದ್ರಿ ದೇವಾಲಯ ಅಕ್ರಮ ಪ್ರವೇಶ; ಮೂವರ ವಿರುದ್ಧ ಪ್ರಕರಣ

Published 12 ಮೇ 2023, 19:35 IST
Last Updated 12 ಮೇ 2023, 19:35 IST
ಅಕ್ಷರ ಗಾತ್ರ

ಮಂಗಳೂರು: ನಗರದ ಕದ್ರಿ ಮಂಜುನಾಥೇಶ್ವರ ದೇವಾಲಯಕ್ಕೆ ಅಕ್ರಮವಾಗಿ ಪ್ರವೇಶಿಸಿದ ಆರೋಪದ ಮೇಲೆ ಮೂವರ ವಿರುದ್ಧ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಸನ್ ಶಾಹಿನ್ (19), ಉಮ್ಮರ್ ಫಾರೂಕ್ (21), ಮಹಮ್ಮದ್ ಜಾಫರ್ (18) ಆರೋಪಿಗಳು.

ಗುರುವಾರ ರಾತ್ರಿ 10 ಗಂಟೆಯ ಸುಮಾರಿಗೆ ಮೋಟಾರ್ ಸೈಕಲ್‌ನಲ್ಲಿ ಬಂದ ಈ ಮೂವರು ಅಕ್ರಮವಾಗಿ ಪ್ರವೇಶಿಸಿ ದೇವಾಲಯದ ಅಂಗಣದಲ್ಲಿ ಸುತ್ತಾಡುತ್ತಿದ್ದರು. ಸಂಶಯಗೊಂಡ ದೇವಾಲಯದ ಸಿಬ್ಬಂದಿ ಅವರನ್ನು ವಿಚಾರಿಸಿದ್ದಾರೆ. ಸಮರ್ಪಕವಾಗಿ ಉತ್ತರ ನೀಡದೆ, ಭದ್ರತಾ ಸಿಬ್ಬಂದಿಗೆ ಅವಾಚ್ಯ ಪದಗಳಿಂದ ಬೈದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ದೇವಾಲಯದ ವ್ಯವಸ್ಥಾಪನಾ ಸಮಿತಿಯವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡು, ಈ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಮಂಗಳೂರು ಪೊಲೀಸ್‌ ಕಮಿಷನರ್‌ ಕುಲದೀಪ್‌ ಕುಮಾರ್‌ ಜೈನ್‌ ತಿಳಿಸಿದ್ದಾರೆ.

ತನಿಖೆಗೆ ಆಗ್ರಹ: ಭದ್ರತಾ ಸಿಬ್ಬಂದಿ ಇರುವಾಗಲೇ ಅಕ್ರಮವಾಗಿ ದೇವಾಲಯದ ಗೇಟ್ ಪ್ರವೇಶಿಸಿ, ದೇವಸ್ಥಾನದ ಅಂಗಣದಲ್ಲಿ ಪಾದರಕ್ಷೆ ಸಹಿತ ದ್ವಿಚಕ್ರ ವಾಹನದಲ್ಲಿ ಸುತ್ತು ಹಾಕಿರುವುದರ ಹಿಂದೆ ಭಯೋತ್ಪಾದಕ ಕೃತ್ಯ ಅಥವಾ ದೇವಸ್ಥಾನ ಅಪವಿತ್ರಗೊಳಿಸುವ ಸಂಚು ಇರುವ ಸಂಶಯವಿದೆ ಎಂದು ವಿಶ್ವಹಿಂದೂ ಪರಿಷತ್ ಹೇಳಿದೆ.

ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಮತ್ತು ಕದ್ರಿ ದೇವಸ್ಥಾನಕ್ಕೆ ಶಾಶ್ವತ ಪೊಲೀಸ್ ಸಿಬ್ಬಂದಿ ನೀಡಿ ಭದ್ರತೆ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಮತ್ತು ನಗರ ಪೊಲೀಸ್ ಕಮಿಷನರ್‌ಗೆ ಮನವಿ ಸಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT