ಶುಕ್ರವಾರ, ಜುಲೈ 30, 2021
21 °C

ನೂಲು ಸಾಗಣೆ: ₹2.78 ಲಕ್ಷ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ನಕಲಿ ದಾಖಲೆಗಳೊಂದಿಗೆ ನೂಲು ಸಾಗಿಸುತ್ತಿದ್ದ ಲಾರಿಯನ್ನು ವಶಕ್ಕೆ ಪಡೆದಿರುವ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ₹2,78,640 ದಂಡ ವಿಧಿಸಿದ್ದಾರೆ.

ಕೇರಳದಿಂದ ಮಹಾರಾಷ್ಟ್ರಕ್ಕೆ ಈ ನೂಲನ್ನು ಸಾಗಿಸಲಾಗುತ್ತಿತ್ತು. ಒಟ್ಟು ₹11.61 ಲಕ್ಷ ಮೌಲ್ಯದ ನೂಲು ಸಾಗಣೆಗೆ ನಕಲಿ ದಾಖಲೆಗಳನ್ನು ಬಳಸಲಾಗುತ್ತಿತ್ತು. ಮಾಹಿತಿ ಪಡೆದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು, ನಗರದ ಕೊಟ್ಟಾರ ಚೌಕಿ ಬಳಿ ಲಾರಿಯನ್ನು ತಪಾಸಣೆ ನಡೆಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.