ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ತೂರು: ಹಲಸು ಪ್ರಿಯರ ಮನ ತಣಿಸಿದ ಮೇಳ

Published 17 ಜೂನ್ 2023, 13:52 IST
Last Updated 17 ಜೂನ್ 2023, 13:52 IST
ಅಕ್ಷರ ಗಾತ್ರ

ಪುತ್ತೂರು: ಪುತ್ತೂರಿನ ನವತೇಜ ಸಂಸ್ಥೆ, ಬೆಂಗಳೂರಿನ ಐಐಎಚ್ಆರ್ ಹಾಗೂ ಪುತ್ತೂರಿನ ಜೆಸಿಐ ಸಂಸ್ಥೆಯ ಆಶ್ರಯದಲ್ಲಿ 6ನೇ ವರ್ಷದ ‘ಹಲಸು-ಹಣ್ಣು ಮೇಳ’ ಬಪ್ಪಳಿಗೆಯ ಜೈನ ಭವನದಲ್ಲಿ ಶನಿವಾರ ಆರಂಭಗೊಂಡಿತು.

ವಿವಿಧ ಬಗೆಯ ಹಲಸಿನ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ, ಹಲಸಿನ ಹಣ್ಣಿನ ವಿವಿಧ ಖಾದ್ಯಗಳ ಮಳಿಗೆಗಳು ಮನಸೆಳೆದವು.

ಬೆಂಗಳೂರಿನ ಐಐಎಚ್ಆರ್ ಸಂಸ್ಥೆಯ ನಿರ್ದೇಶಕ ಡಾ.ಸಂಜಯ ಕುಮಾರ್ ಸಿಂಗ್ ಅವರು ಎರಡು ದಿನಗಳ ಮೇಳಕ್ಕೆ ಚಾಲನೆ ನೀಡಿದರು.

ಹಲಸಿನ ಹನ್ಣಿನ ಬಗ್ಗೆ ಕೆಲವು ವರ್ಷಗಳಿಂದ ಸಂಶೋಧನೆಗಳು ನಡೆಯುತ್ತಿವೆ. ಬೆಂಗಳೂರಿನ ಐಐಎಚ್ಆರ್ ಸಂಸ್ಥೆ ಹಲಸಿನ ಹಣ್ಣು ಸಹಿತ ವಿವಿಧ ಹಣ್ಣುಗಳಲ್ಲಿರುವ ಔಷಧೀಯ ಗುಣ, ಹಲಸಿನ ಹಣ್ಣಿನ ವಿವಿಧ ಉತ್ಪನ್ನಗಳನ್ನು ತಯಾರಿಸುವ ಸಂಬಂಧ ಸಂಶೋಧನೆ ಮಾಡುತ್ತಿದೆ. ಸ್ಥಳೀಯವಾಗಿ ಹಲಸಿನ ಹಣ್ಣು ಸಹಿತ ವಿವಿಧ ಹಣ್ಣುಗಳ ಮೌಲ್ಯವರ್ಧನೆ, ಉತ್ಪನ್ನಗಳ ಕುರಿತ ಅರಿವಿಗೆ ಇಂಥ ಮೇಳಗಳಲ್ಲಿ ಪಾಲ್ಗೊಳ್ಳಬೇಕು ಎಂದರು.

ಐಐಎಚ್ಅರ್ ಯೋಜನಾ ಸಂಯೋಜಕ ಪಿ.ಸಿ.ಪಾಟೀಲ್ ಮಾತನಾಡಿ, ಇಂಥ ಮೇಳಗಳು ಮಾಹಿತಿ ವಿನಿಮಯಕ್ಕೆ ಅನುಕೂಲಕರವಾಗಿವೆ ಎಂದರು.

‌‌ಅಧ್ಯಕ್ಷತೆ ವಹಿಸಿದ್ದ ಸುದಾನ ವಿದ್ಯಾಸಂಸ್ಥೆಯ ಸಂಚಾಲಕ ವಿಜಯ ಹಾರ್ವಿನ್ ಮಾತನಾಡಿ, ಹಲಸಿನ ಹಣ್ಣು ಸಹಿತ ವಿವಿಧ ಹಣ್ಣುಗಳನ್ನು ಬೆಳೆಸುವ, ಮೌಲ್ಯವರ್ಧನೆಗೊಳಿಸುವ ತರಬೇತಿ ಕಾರ್ಯಕ್ರಮಗಳನ್ನು ಪುತ್ತೂರಿನಲ್ಲಿ ಹಮ್ಮಿಕೊಳ್ಳಲು ಸಂಘಟಕರು, ಯುವಕರು ಮುಂದೆ ಬರಬೇಕು. ಸಾವಯವ ಕೃಷಿಯತ್ತ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದರು.

ವಕೀಲ ಫಝಲ್ ರಹೀಮ್, ರೋಟರಿ ಕ್ಲಬ್ ಯುವ ನಿಯೋಜಿತ ಅಧ್ಯಕ್ಷ ಪಶುಪತಿ ಶರ್ಮ, ವಲಯ ಜೆಸಿಐ ಕಾರ್ಯಕ್ರಮ ನಿರ್ದೇಶಖಿ ಅಕ್ಷತಾ ಗಿರೀಶ್ ಮಾತನಾಡಿದರು.

ಪುತ್ತೂರು ಜೆಸಿಐ ಅಧ್ಯಕ್ಷ ಸುಹಾಸ್ ಮರಿಕೆ ಸ್ವಾಗತಿಸಿದರು. ನವತೇಜದ ಅಧ್ಯಕ್ಷ ಅನಂತಪ್ರಸಾದ್ ವಂದಿಸಿದರು. ಅಡಿಕೆ ಪತ್ರಿಕೆಯ ನಾ.ಕಾರಂತ ಪೆರಾಜೆ ನಿರೂಪಿಸಿದರು. ಪುತ್ತೂರು ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅವರು ಮಳಿಗೆಗಳನ್ನು ಉದ್ಘಾಟಿಸಿದರು.

ಮೇಳದಲ್ಲಿ ಸುಮಾರು 50 ಹಲಸಿನ ಉತ್ಪನ್ನಗಳ ಪ್ರದರ್ಶನ, ಮಾರಾಟಗಳ ಮಳಿಗೆಗಳಿವೆ. ವಿವಿಧ ಹಣ್ಣುಗಳ, ಸಸಿಗಳ ಪ್ರದರ್ಶನ ಮಾರಾಟವೂ ಇದೆ. ಈ ಬಾರಿಯ ಹಲಸಿನ ಹಣ್ಣು ಮೇಳಕ್ಕೆ ಉತ್ತಮ ಬೆಂಬಲ ವ್ಯಕ್ತವಾಗಿದೆ ಎಂದು ಆಯೋಜಕ ಸುಹಾಸ್ ಮರಿಕೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT