ಶನಿವಾರ, ನವೆಂಬರ್ 16, 2019
21 °C

ಹುಟ್ಟೂರಿನತ್ತ ಹೊರಟ ಕದ್ರಿ ಗೋಪಾಲನಾಥ್ ಪಾರ್ಥಿವ ಶರೀರ

Published:
Updated:

ಮಂಗಳೂರು: ಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಅವರ ಪಾರ್ಥಿವ ಶರೀರವನ್ನು ಇಲ್ಲಿನ ಪುರಭವನದಲ್ಲಿ ಸಾರ್ವಜನಿಕ ಅಂತಿಮ ದರ್ಶನ ಮುಗಿಸಿ, ಅವರ ಹುಟ್ಟೂರು ಬಂಟ್ವಾಳ ತಾಲ್ಲೂಕಿನ ಸಜಿಪ ಮಿತ್ತಕೇರಿಗೆ ಕೊಂಡೊಯ್ಯಲಾಯಿತು.

ಬೆಳಿಗ್ಗೆ 10.15ರಿಂದ ಮಧ್ಯಾಹ್ನ1.45ರವರೆಗೆ ಸಾರ್ವಜನಿಕ ಅಂತಿಮ ದರ್ಶನ ನಡೆಯಿತು. ಕಲಾವಿದರು, ಚುನಾಯಿತ ಪ್ರತಿನಿಧಿಗಳು ಸೇರಿದಂತೆ ಸಾವಿರಾರು ಮಂದಿ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು. ಕೊನೆಯ ಕ್ಷಣಗಳಲ್ಲಿ ಚೆನ್ನೈನಿಂದ ರೈಲಿನಲ್ಲಿ ಬಂದ ಹಲವು ಕಲಾವಿದರು, ಗೋಪಾಲನಾಥ್ ಅವರ ಶಿಷ್ಯರು ಓಡೋಡಿ ಬಂದು ಅಂತಿಮ ದರ್ಶನ ಪಡೆದರು.

ಇದನ್ನೂ ಓದಿ: ಕದ್ರಿ ಗೋಪಾಲನಾಥ್ ಪಾರ್ಥಿವ ಶರೀರದ ಅಂತಿಮ ಯಾತ್ರೆ, ದರ್ಶನ ಪಡೆದ ಗಣ್ಯರು

ಮಧ್ಯಾಹ್ನ 2 ಗಂಟೆಗೆ ಸರಿಯಾಗಿ ಆಂಬುಲೆನ್ಸ್‌ನಲ್ಲಿ ಪಾರ್ಥಿವ ಶರೀರವನ್ನು ಸಜಿಪ ಮಿತ್ತಕೇರಿಗೆ ಕೊಂಡೊಯ್ಯಲಾಯಿತು. ಮಧ್ಯಾಹ್ನ 3 ಗಂಟೆಗೆ ಪಾರ್ಥಿವ ಶರೀರ ಸಜಿಪ ಮಿತ್ತಕೇರಿ ತಲುಪಲಿದೆ. ಸಂಜೆ 4 ಗಂಟೆಗೆ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನೆರವೇರಲಿದೆ.

ಇದನ್ನೂ ಓದಿ: ಸ್ಯಾಕ್ಸೋಫೋನ್‌ ಚಕ್ರವರ್ತಿ ಕದ್ರಿ ಗೋಪಾಲನಾಥ್‌ ನಿಧನ

ಇನ್ನಷ್ಟು...

ಹುಟ್ಟೂರಲ್ಲಿ ಅ.14ಕ್ಕೆ ಕದ್ರಿ ಗೋಪಾಲನಾಥ್ ಅಂತ್ಯಕ್ರಿಯೆ
ವಿಶೇಷ ಸಂದರ್ಶನ | ಸೈನಿಕರಿಗೆ ಸಂಗೀತ: ಕದ್ರಿ ಕನಸು
ರಾಮನವಮಿ ಸಂಗೀತೋತ್ಸವದಲ್ಲಿ ಇನ್ನು ಕೇಳದು ‘ಕದ್ರಿ‘ ಸ್ಯಾಕ್ಸೋಫೋನ್‌ ಇಂಪು
ವ್ಯಕ್ತಿತ್ವ | ಸ್ಯಾಕ್ಸೋಫೋನ್ ಚಕ್ರವರ್ತಿ ‘ಕದ್ರಿ’
ವಿಡಿಯೊ | ಮಂಗಳೂರಿನಲ್ಲಿ ಕದ್ರಿ ಗೋಪಾಲನಾಥ್ ನೀಡಿದ ಕೊನೆಯ ಸಂಗೀತ ಕಾರ್ಯಕ್ರಮ
ಸ್ಯಾಕ್ಸೋಫೋನ್‌ ಚಕ್ರವರ್ತಿ ಕದ್ರಿ ಗೋಪಾಲನಾಥ್‌ ನಿಧನ 
ಕದ್ರಿ ಗೋಪಾಲನಾಥ್ ಮನದ ಮಾತು: ಸಂಗೀತಕ್ಕೆ ಜಾತಿ ಇಲ್ಲ
ರಾಮನವಮಿ ಸಂಗೀತೋತ್ಸವದಲ್ಲಿ ಇನ್ನು ಕೇಳದು ‘ಕದ್ರಿ‘ ಸ್ಯಾಕ್ಸೋಫೋನ್‌ ಇಂಪು
ಕುವೈತ್‌ನಲ್ಲಿರುವ ಕದ್ರಿ ಗೋಪಾಲನಾಥ್ ಪುತ್ರನಿಗೆ ವೀಸಾ ವ್ಯವಸ್ಥೆ ಮಾಡಿಕೊಡಿ: ಮನವಿ
ಕರ್ನಾಟಕ ಸಂಗೀತಕ್ಕೆ ಬೆಲ್ಜಿಯಂ ವಾದ್ಯ ಸ್ಯಾಕ್ಸೊಫೋನ್ ಒಗ್ಗಿದ ಕಥೆ
ಕದ್ರಿ ಗೋಪಾಲನಾಥ್ ಹೇಳುತ್ತಿದ್ದ ‘ಅಘೋರಿ ಕತೆ’ ಕೇಳಿದ್ದೀರಾ?

ಪ್ರತಿಕ್ರಿಯಿಸಿ (+)