ಶನಿವಾರ, ನವೆಂಬರ್ 28, 2020
26 °C
ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆ ವೈರಲ್‌

'ಉಳ್ಳಾಲ ಪೇಟೆ ಪಾಕಿಸ್ತಾನ ಅಲ್ವಾ': ಡಾ.ಕಲ್ಲಡ್ಕ ಪ್ರಭಾಕರ್ ಭಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ‘ಉಳ್ಳಾಲ ಪಾಕಿಸ್ತಾನವಾಗಿದೆ’ ಎಂದು ಆರ್‌ಎಸ್‌ಎಸ್‌ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್‌ ಭಟ್‌ ಹೇಳಿರುವ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಭಾನುವಾರ ಕಿನ್ಯದ ಕೇಶವ ಶಿಶುಮಂದಿರದ ಗ್ರಾಮ ವಿಕಾಸ ಸಪ್ತಾಹದಲ್ಲಿ ಡಾ.ಪ್ರಭಾಕರ್‌ ಭಟ್‌ ಮಾತನಾಡಿದ್ದಾರೆ. ‘ಉಳ್ಳಾಲ ಪೇಟೆಗೆ ಹೋದರೆ ಅದು ಪಾಕಿಸ್ತಾನವೇ ಅಲ್ವಾ? ಅದು ಬೇರೆ ಆಗೋಕೆ ಸಾಧ್ಯ ಇದೆ’ ಎಂದು ಕೇಳಿದ್ದಾರೆ.

‘ಪಾಕಿಸ್ತಾನ ಯಾಕೆ ಆಯಿತು? ನಮ್ಮವರ ಸಂಖ್ಯೆ ಕಡಿಮೆ ಇತ್ತು, ಅವರ ಸಂಖ್ಯೆ ಹೆಚ್ಚಾಗಿತ್ತು. ಹೀಗಾಗಿ ಪಾಕಿಸ್ತಾನ, ಬಾಂಗ್ಲಾದೇಶ ನಿರ್ಮಾಣವಾದವು. ಅದೇ ರೀತಿ ಅಲ್ಲಲ್ಲಿ ಪಾಕಿಸ್ತಾನಗಳು ಜನ್ಮ ತಾಳುತ್ತಿವೆ’ ಎಂದಿದ್ದಾರೆ.

‘ಮನೆಯಲ್ಲಿ ಒಂದೇ ಮಗುವಿದ್ದಾಗ ಆ ಮಗುವಿಗೆ ಅಣ್ಣ, ತಮ್ಮ, ಅಕ್ಕ, ತಂಗಿ ಯಾರೂ ಇರಲ್ಲ. ಆಗ ಆ ಮಗು ಸ್ವಾರ್ಥಿಯಾಗುತ್ತದೆ. ಮನೆಯಲ್ಲಿ ಮಕ್ಕಳು ಹೆಚ್ಚಿದಷ್ಟು ಆನಂದ, ಖುಷಿ ಹೆಚ್ಚಾಗಿರುತ್ತದೆ. ಇದೀಗ ಹಿಂದೂ ಸಮಾಜದಲ್ಲಿ ಸಂಖ್ಯೆ ಕಡಿಮೆ ಇದೆ. ಕಿನ್ಯದಲ್ಲಿ ಕೇಳಿ ಸುತ್ತಲೂ ಯಾರಿದ್ದಾರೆ ಅಂತಾ? ಅಲ್ಲದೇ ಉಳ್ಳಾಲದ ಬಗ್ಗೆ ನಾನೇನು ಹೇಳಬೇಕಾಗಿಲ್ಲ. ನಮ್ಮ ಸಂಖ್ಯೆ ಕಡಿಮೆಯಾದರೆ, ಆಗ ನಮ್ಮ ದೇವಸ್ಥಾನ, ದೈವಸ್ಥಾನಗಳನ್ನು ಉಳಿಸುವವರು ಯಾರು? ನಮ್ಮ ಸಂಪ್ರದಾಯ, ಸಂಸ್ಕೃತಿಯನ್ನು ಉಳಿಸುವವರು ಯಾರು’ ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು