ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನುಷ್ಠಾನದಲ್ಲಿ ಗಟ್ಟಿಯಾಗಿದ್ದೇವೆ’

Last Updated 1 ನವೆಂಬರ್ 2021, 16:35 IST
ಅಕ್ಷರ ಗಾತ್ರ

ಉಳ್ಳಾಲ: ‘ತೌಳವ ಪ್ರಾಂತ್ಯದ ಜೀವನ ಕ್ರಮ ಒಟ್ಟು ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಜಿಲ್ಲೆಯ ಜನ ಕೃಷಿ ಸಂಸ್ಕೃತಿಯಲ್ಲಿ ಬದುಕು ಕಟ್ಟಿಕೊಂಡವರು. ಅನುಷ್ಠಾನದಲ್ಲಿ ಯಾವತ್ತಿದ್ದರೂ ಗಟ್ಟಿ ಕನ್ನಡಿಗರಾಗಿದ್ದೇವೆ’ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಹೇಳಿದರು.

ದೇರಳಕಟ್ಟೆಯ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯೋತ್ಸವದ ಧ್ವಜಾರೋಹಣ ಮಾಡಿ ಅವರು ಮಾತನಾಡಿದರು.
‘ಯಕ್ಷಗಾನ ವಿದ್ವಾಂಸ ಡಾ. ಪ್ರಭಾಕರ ಜೋಷಿ ಅವರ ಮನೆ ಭಾಷೆ ಮರಾಠಿ, ಕುಂಬ್ಳೆ ಸುಂದರ ರಾವ್, ಅಮೃತ ಸೋಮೇಶ್ವರ ಅವರ ಮನೆ ಭಾಷೆ ಮಲಯಾಳಂ, ಡಾ ಜಬ್ಬಾರ್ ಸಮೊ ಮನೆ ಭಾಷೆ ಬ್ಯಾರಿ, ಇದಿನಬ್ಬರ ಮನೆಯ ಭಾಷೆ ಬೇರೆಯೇ ಆಗಿದ್ದರೂ ಅವರೆಲ್ಲರೂ ಕನ್ನಡ ಭಾಷೆಯನ್ನು ಮೇಲ್ಮಟ್ಟಕ್ಕೆ ತರಲು ಸದಾ ಪ್ರಯತ್ನಿಸುತ್ತಿದ್ದಾರೆ’ ಎಂದರು.

ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ. ಸತೀಶ್ ಕುಮಾರ್ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಕ್ಷೇಮ ವೈದ್ಯಕೀಯ ಅಧೀಕ್ಷಕ ಮೇಜರ್ ಡಾ. ಶಿವಕುಮಾರ್ ಹೀರೇಮಠ, ಎನ್‍ಎಸ್‍ಎಸ್ ನಿಕಟಪೂರ್ವ ಸಂಯೋಜಕಿ ಡಾ. ಸುಮಲತಾ, ಸಾರ್ವಜನಿಕ ಸಂಪರ್ಕ ಅಧಿಕಾರಿ ಹೇಮಂತ್ ಶೆಟ್ಟಿ ಇದ್ದರು. ಡಾ. ಸಾಯಿಗೀತಾ ಹಾಗೂ ಸುಮಿತಾ ಚೌಟ ನಿರೂಪಿಸಿದರು.
ಶಶಿಕುಮಾರ್ ಶೆಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT