ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸ್ಕ್‌ನಲ್ಲಿ ಕನ್ನಡ ಜಾಗೃತಿ

ಕನ್ನಡ ಸಾಹಿತ್ಯ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಘಟಕ
Last Updated 18 ಜೂನ್ 2020, 12:53 IST
ಅಕ್ಷರ ಗಾತ್ರ

ಮಂಗಳೂರು: ಕನ್ನಡ ಸಾಹಿತ್ಯ ಪರಿಷತ್‌ ದಕ್ಷಿಣ ಕನ್ನಡ ಜಿಲ್ಲಾ ಘಟಕವು ಮಾಸ್ಕ್ ಮೂಲಕ ಕನ್ನಡ ಜಾಗೃತಿ ಮೂಡಿಸುವ ವಿನೂತನ ಹೆಜ್ಜೆ ಇಟ್ಟಿದೆ.

ನಗರದಲ್ಲಿ ಗುರುವಾರ ‘ಮಾಸ್ಕ್ ದಿನ’ ಹಮ್ಮಿಕೊಂಡಿದ್ದು, ಬಿಳಿ ಬಟ್ಟೆಯಲ್ಲಿ ‘ಕ’ ಅಕ್ಷರ ಮುದ್ರಿಸಿದ ಮಾಸ್ಕ್‌ಗಳನ್ನು ವಿತರಿಸಲಾಯಿತು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ, ‘ವಿವಿಧ ಸಂದರ್ಭಗಳಲ್ಲಿ ಸಂಭಾಷಣೆ ನಡೆಸುವಾಗ ಅಂಗವಸ್ತ್ರ ಬಳಸುವ ಕ್ರಮ ಹಿಂದಿನಿಂದಲೂ ಇದೆ. ಇದೇ ‘ಮಾಸ್ಕ್‌’ ರೂಪದಲ್ಲಿ ಬಂದಿದೆ’ ಎಂದರು.

‘ಕೊರೊನಾ ಓಡಿಸುವ ಜೊತೆಗೆ ನಮ್ಮ ನೆಲದ ಕನ್ನಡ ಸಂಸ್ಕೃತಿ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ. ಅದಕ್ಕಾಗಿ ‘ಕ’ ಅಕ್ಷರ ಮುದ್ರಿಸಿದ ಮಾಸ್ಕ್ ವಿತರಣೆ ಹಾಗೂ ಬಳಕೆಯನ್ನು ಉತ್ತೇಜಿಸಿದ್ದೇವೆ’ ಎಂದು ಅವರು ವಿವರಿಸಿದರು.

‘ವ್ಯಕ್ತಿ ಜೊತೆ ರಾಜ್ಯ, ದೇಶದ ಸ್ವಾಸ್ಥ್ಯ ರಕ್ಷಣೆಯೂ ನಮ್ಮ ಮೇಲಿದೆ. ನಾವೆಲ್ಲ ಮಾಸ್ಕ್‌ ಧರಿಸೋಣ’ ಎಂದರು.

ಯಕ್ಷಗಾನ ವಿದ್ವಾಂಸ ಡಾ.ಎಂ. ಪ್ರಭಾಕರ ಜೋಶಿ, ಪ್ರಸಂಗ ಕರ್ತ ಪೊಳಲಿ ನಿತ್ಯಾನಂದ ಕಾರಂತ, ಜನಾರ್ದನ ಹಂದೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT