ಮಂಗಳೂರು: ಕೃಷಿ ಬಂಡವಾಳ ವಿಸ್ತರಣೆ ಮೂಲಕ ಹೈನುಗಾರಿಕಾ ಉದ್ಯಮದಲ್ಲಿರುವ ಆರ್ಥಿಕ ಅವಕಾಶ ಬಳಸಿಕೊಳ್ಳಲು ಕರ್ಣಾಟಕ ಬ್ಯಾಂಕ್ ಮುಂದಾಗಿದೆ.

ಇದರ ಭಾಗವಾಗಿ ಫಿನ್ಟೆಕ್ ಸಂಸ್ಥೆಯಾದ ‘ಡಿಜಿವೃದ್ಧಿ (ಡಿಜಿವಿ)’ ಸಹಭಾಗಿತ್ವದಲ್ಲಿ ಹಣಕಾಸು ಸೇವೆ ಒದಗಿಸಲಿದೆ. ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್) ಸಂಯೋಜಿತ ಗ್ರಾಮಾಂತರ ಹಾಗೂ ಇತರ ಹಾಲು ಉತ್ಪಾದಕ ಸಹಕಾರ ಸಂಘಗಳಲ್ಲಿ ಈ ಸೇವೆಗಳು ಲಭ್ಯವಾಗಲಿದ್ದು, ಪ್ರಸ್ತುತ ಚಾಮರಾಜನಗರ ಹಾಲು ಒಕ್ಕೂಟಕ್ಕೆ ಸೇರಿದ ಹಾಲಿನ ಸೊಸೈಟಿಗಳಿಗೆ ಈ ಸೌಲಭ್ಯ ಸಿಗುತ್ತಿದೆ. ಸದ್ಯದಲ್ಲಿ ಎಲ್ಲ ಹಾಲು ಒಕ್ಕೂಟಗಳಿಗೆ ಇದನ್ನು ವಿಸ್ತರಿಸಲಾಗುವುದು ಎಂದು ಬ್ಯಾಂಕ್ನ ಎಂಡಿ ಹಾಗೂ ಸಿಇಒ ಶ್ರಿಕೃಷ್ಣನ್ ಎಚ್ ಹೇಳಿದ್ದಾರೆ.

‘ಹೈನುಗಾರಿಕಾ ಕ್ಷೇತ್ರಕ್ಕೆ ಬ್ಯಾಂಕಿಂಗ್ ಉತ್ಪನ್ನಗಳ ಮೂಲಕ ಕರ್ಣಾಟಕ ಬ್ಯಾಂಕ್ ಇನ್ನಷ್ಟು ನೆರವಾಗಲಿದೆ’ ಎಂದು ಬ್ಯಾಂಕ್ನ ಕಾರ್ಯನಿರ್ವಾಹಕ ನಿರ್ದೇಶಕ ಶೇಖರ್ ರಾವ್ ಹೇಳಿದ್ದಾರೆ.

ಡಿಜಿವಿ ಪೇ ಉತ್ಪನ್ನವು ಹೈನುಗಾರರಿಗೆ ಪಾವತಿ ಸರಪಳಿಯನ್ನು ಸರಳಗೊಳಿಸುತ್ತದೆ ಮತ್ತು ಬ್ಯಾಂಕ್ ಖಾತೆ ತೆರೆಯುವುದು ಸೇರಿದಂತೆ ಬ್ಯಾಂಕಿಂಗ್ ಅಗತ್ಯಗಳಿಗೆ ನೆರವಾಗುತ್ತದೆ ಎಂದು ಡಿಜಿವೃದ್ಧಿ ಸಂಸ್ಥಾಪಕ ಮತ್ತು ಸಿಇಒ ರಾಘವನ್ ವೆಂಕಟೇಶನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.