ಮಂಗಳವಾರ, ಜೂನ್ 28, 2022
25 °C

ಗಡಿನಾಡಿನಲ್ಲಿ ಕವಿ ಕಯ್ಯಾರ ಸ್ಮರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕಾಸರಗೋಡು ಗಡಿನಾಡ ಸಾಹಿತ್ಯ-ಸಾಂಸ್ಕೃತಿಕ ಅಕಾಡೆಮಿ,  ಮಂಗಳೂರು ಕಲ್ಕೂರ ಪ್ರತಿಷ್ಠಾನ  ಹಾಗೂ ಕವಿ ಕಯ್ಯಾರ ಕುಟುಂಬದ ಆಶ್ರಯದಲ್ಲಿ ಕವಿ  ದಿವಂಗತ ಕೈಯಾರ ಕಿಂಞಣ್ಣ ರೈ ಅವರ 106ನೇ ಜನ್ಮದಿನವನ್ನು ಕುಟುಂಬದ ‘ಕವಿತಾ ಕುಟೀರ’ದಲ್ಲಿ ಆಚರಿಸಲಾಯಿತು.

ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ ಅವರು ಗೂಗಲ್ ಮೀಟ್‌ನಲ್ಲಿ ಭಾಗವಹಿಸಿ ಕನ್ನಡದ ಕಲಿ ಕಯ್ಯಾರ ಕಿಂಞಣ್ಣ ರೈ ಅವರು ಸಾಹಿತ್ಯ, ಸಾಂಸ್ಕೃತಿಕ, ರಾಜಕೀಯ, ಮಾತ್ರವಲ್ಲದೆ ಭೂಮಿಯ ಒಡಲಲ್ಲೂ ನಲ್ಮೆಯ ಬೀಜ ಬಿತ್ತಿ ಪರಿಶ್ರಮದಿಂದಲೇ ಪ್ರತಿಫಲದ ಬೆಳಕ ಕಂಡವರು. ರೈತನಾಗಿ, ಸಾಹಿತಿಯಾಗಿ, ಪಂಚಾಯತ್ ಅಧ್ಯಕ್ಷರಾಗಿ, ಭಾಷೆಯ ಮೇಲಿನ ಅತೀವ ಪ್ರೀತಿ ಹಾಗೂ ಭಕ್ತಿಯಿಂದ ಭಾಷೆಯ ಉಳಿವಿಗಾಗಿ ಹೋರಾಡಿದ ಧೀಮಂತ ಹೋರಾಟಗಾರ ಆಗಿದ್ದರು’ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ  ಶಿವಾನಂದ ತಗಡೂರು  ಮಾತನಾಡಿ, ಕಯ್ಯಾರರ ಜನ್ಮದಿನಾಚರಣೆ, ಅವರ ದಾಖಲಾತಿಗಳನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ, ಅವರ ಪತ್ರಕರ್ತನ ಕೆಲಸ ಹೆಮ್ಮೆ ತರುವಂತದ್ದು’ ಎಂದು ಹೇಳಿದರು.

ಕರ್ನಾಟಕ ಜಾನಪದ ಪರಿಷತ್ ಗಡಿನಾಡ ಘಟಕದ ಅಧ್ಯಕ್ಷ ಎ. ಆರ್. ಸುಬ್ಬಯ್ಯ ಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಧ್ಯಾಪಕ ಶ್ರೀನಾಥ್ ಕೈಯಾರ ಜೀವನಗಾಥೆಯನ್ನು ನೆನಪಿಸಿದರು. ಪ್ರಮುಖರಾದ ಮಾಹಿನ್ ಕೇಳೋಟ್, ಕುಂಬ್ಡಾಜೆ ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ಗೋಸಡ, ಅಕಾಡೆಮಿಯ ಕಾರ್ಯದರ್ಶಿ ಅಖಿಲೇಶ್ ನಗುಮುಗ, ಯಕ್ಷಗುರು ಜಯರಾಮ್ ಪಾಟಾಳಿ ಪಡುಮಲೆ, ಮಮ್ಮುಞ ಪಚ್ಚಂಬಲ ಮಾತನಾಡಿದರು.  ವಸಂತ ಬಾರಡ್ಕ , ಜೋತ್ಸ್ನಾ ಕಡಂದೇಲು, ಚಿತ್ತರಂಜನ್ , ಪ್ರದೀಪ್ ಕಡಂಬಾರ್ ಕಯ್ಯಾರರ ಆಯ್ದ ಕವನಗಳನ್ನು ಹಾಡಿದರು.

ಕಯ್ಯಾರರ ಪುತ್ರ ಪ್ರಸನ್ನಕುಮಾರ , ಕೃಷ್ಣ ಪ್ರದೀಪ,  ಆರತಿ ರೈ , ನಿರಂಜನ ರೈ ಪೆರಡಾಲ ಗುತ್ತು , ರಂಗನಾಥ ರೈ , ಉಷಾಲತಾ, ಪ್ರಸನ್ನ ರೈ, ರವಿರಾಜ ರೈ , ಸುಷ್ಮಾ ರವಿರಾಜ್, ಪ್ರಜ್ವಲ್ ರೈ,  ಋಷೀಕಾ ಪ್ರಜ್ವಲ್, ಉಮಾವತಿ ಶೆಟ್ಟಿ ಇದ್ದರು. ಕೈಯಾರರ ಕುಟುಂಬದವರಿಂದ ಕೋವಿಡ್‌ ಕಿಟ್‌ ವಿತರಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು