ಮಂಗಳವಾರ, ಸೆಪ್ಟೆಂಬರ್ 29, 2020
22 °C

ಗಡಿ: ಸಂಚಾರಕ್ಕೆ ಕಾಸರಗೋಡು ಜಿಲ್ಲಾಡಳಿತ ಅನುಮತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಕಾಸರಗೋಡಿನಿಂದ ದಕ್ಷಿಣ ಕನ್ನಡ ಜಿಲ್ಲೆಗೆ ನಿತ್ಯ ತೆರಳುವ ವರಿಗೆ ಪ್ರಯಾಣಕ್ಕೆ ಅನುಮತಿ ನೀಡಿ ಕಾಸರಗೋಡು ಜಿಲ್ಲಾಧಿಕಾರಿ ಡಾ. ಸಜಿತ್ ಬಾಬು ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ.

ಕಾಯಂ ಆಗಿ ತೆರಳುವವರಿಗೆ ಅನುಕೂಲವಾಗುವಂತೆ ತಲಪಾಡಿಯಲ್ಲಿ ನೋಂದಣಿಗೆ ವ್ಯವಸ್ಥೆ ಮಾಡಲಾಗಿದೆ. ದಕ್ಷಿಣ ಕನ್ನಡಕ್ಕೆ ನಿತ್ಯ ತೆರಳುವವರಿಗೆ ಹಾಗೂ ದಕ್ಷಿಣ ಕನ್ನಡದಿಂದ ಕಾಸರಗೋಡಿಗೆ ಮರಳುವವರಿಗೆ ತಲಪಾಡಿಯಲ್ಲಿ ನೋಂದಣಿ ಡಾಟಾ ಎಂಟ್ರಿ ಟೀಂ ನಡೆಸಲಿದೆ.

ಕೋವಿಡ್ 19 ಜಾಗ್ರತಾ ಪೋರ್ಟಲ್‌ನಲ್ಲಿ ಡೈಲಿ ಪಾಸ್ ವಿಭಾಗದಲ್ಲಿ ನೋಂದಣಿ ಮಾಡಬೇಕು. ತಲಪಾಡಿ ಗಡಿಯಲ್ಲಿ ಜಿಲ್ಲಾ ವೈದ್ಯಾಧಿಕಾರಿ ನೇತೃತ್ವದಲ್ಲಿ ನಡೆಯುವ ಆ್ಯಂಟಿಜನ್ ತಪಾಸಣೆಯ ನೆಗೆಟಿವ್ ಪ್ರಮಾಣ ಪತ್ರ ನೀಡಲಾಗುತ್ತಿದ್ದು, ಈ ಪ್ರಮಾಣಪತ್ರದ ಜತೆಗೆ ಉದ್ಯೋಗಕ್ಕೆ ತೆರಳುವವರು ಸಂಸ್ಥೆಯ ಮಾಲೀಕನ ಹೆಸರು, ಕಚೇರಿ ವಿಳಾಸ ಹಾಗೂ ಸಂಸ್ಥೆಯ ಗುರುತು ಚೀಟಿಯನ್ನು ಕಡ್ಡಾಯವಾಗಿ ತೋರಿಸಬೇಕು. ಅರೋಗ್ಯ ಇಲಾಖೆ ಕೆಲವೇ ನಿಮಿಷದಲ್ಲಿ ಪಾಸ್ ನೀಡಲಿದೆ ಎಂದು ತಿಳಿಸಿದ್ದಾರೆ.

ಪ್ರತಿ ಏಳು ದಿನಗಳಿಗೊಮ್ಮೆ ಪ್ರಯಾಣಿ ಕರು ಈ ಮಾರ್ಗಸೂಚಿ ಪಾಲಿಸಬೇಕಿದೆ. ಇನ್ನೊಂದು ಆದೇಶದವರಿಗೆ ಇದು ಮುಂದುವರಿಯಲಿದೆ ಎಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು