ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೂರು ಸರ್ಕಾರಿ ಕಾಲೇಜಿಗೆ ಬಿ++ ಮಾನ್ಯತೆ

Last Updated 24 ಜನವರಿ 2023, 12:46 IST
ಅಕ್ಷರ ಗಾತ್ರ

ಮಂಗಳೂರು: ಕಾವೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್ (ನ್ಯಾಕ್)ನಿಂದ ಸಿಜಿಪಿಎ 2.93 ಅಂಕಗಳೊಂದಿಗೆ ನ್ಯಾಕ್ ಬಿ++ ಮಾನ್ಯತೆ ದೊರಕಿದೆ.

ನ್ಯಾಕ್ ತಂಡವು ಮೊದಲ ಸುತ್ತಿನ ಶೈಕ್ಷಣಿಕ ಮೌಲ್ಯಮಾಪನಕ್ಕಾಗಿ ಕಾಲೇಜಿಗೆ ಭೇಟಿ ನೀಡಿ ಶೈಕ್ಷಣಿಕ ಗುಣಮಟ್ಟ ಮತ್ತು ವ್ಯವಸ್ಥೆಗಳನ್ನು ಅಧ್ಯಯನ ಮಾಡಿ ಮಾನ್ಯತೆ ನೀಡಿದೆ.

ಹೈದರಾಬಾದ್ ವಿಶ್ವವಿದ್ಯಾಲಯದ ಕುಲಪತಿ ಡಾ. ರಾಜಶೇಖರ ಬೆಲ್ಲಮಕೊಂಡ ಅವರು ನ್ಯಾಕ್ ತಂಡದ ನೇತೃತ್ವ ವಹಿಸಿದ್ದರು. ಬನಾರಸ್ ಹಿಂದು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಅತುಲ್ ತ್ರಿಪಾಠಿ ಸಂಯೋಜಕ ಸದಸ್ಯರಾಗಿದ್ದರು. ಪುಣೆಯ ಮರಾಠವಾಡ ಮಿತ್ರ ಮಂಡಲ್ ವಾಣಿಜ್ಯಶಾಸ್ತ್ರ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಮಧುರಮ್ ಲಾರೆನ್ಸ್ ಸದಸ್ಯರಾಗಿದ್ದರು.

ನ್ಯಾಕ್ ಸಮಿತಿಯು ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ, ಶಾಸಕ ಡಾ. ವೈ. ಭರತ್ ಶೆಟ್ಟಿ ಅವರನ್ನೊಳಗೊಂಡ ಸದಸ್ಯರೊಂದಿಗೆ ಹಾಗೂ ಪೋಷಕರು ಮತ್ತು ಕಾಲೇಜಿನ ಹಳೆಯ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ಶಿವರಾಮ ಪಿ. ಮತ್ತು ಐಕ್ಯೂಎಸಿ ಸಂಚಾಲಕರಾದ ಲೂಯಿಸ್ ಮನೋಜ್ ಅಂಬ್ರೋಸ್ ಮತ್ತು ಎಲ್ಲಾ ಪ್ರಾಧ್ಯಾಪಕರು ಮಾಹಿತಿ ಪ್ರಸ್ತುತಪಡಿಸಿದರು. ವಿಭಾಗಗಳ ಉಸ್ತುವಾರಿಯನ್ನು ಡಾ. ಅವಿತ ಮರಿಯಾ ಕ್ವಾಡ್ರಸ್, ಡಾ. ತೆರೆಜ್ ಪಿರೇರಾ, ರೇಖಾ ಎಸ್. ಎನ್., ಡಾ. ಗೀತಾ ಎಂ. ಎಲ್., ಅಮೃತಾಕ್ಷಿ ಜಿ., ಮಮತಾ ಯು., ಡಾ ಸಂತೋಷ್ ಪಿಂಟೋ, ಪ್ರಮೀಳಾ ಕೆ. ಶುಭ ಕೆ.ಎಚ್. ಮತ್ತು ಮೋಹಿನಿ ವಹಿಸಿದ್ದರು.

ನ್ಯಾಕ್ ತಂಡದ ಭೇಟಿಯ ಸಂದರ್ಭ ಕಾಲೇಜು ಶಿಕ್ಷಣ ಇಲಾಖೆ ಮಂಗಳೂರು ವಲಯದ ಜಂಟಿ ನಿರ್ದೇಶಕರಾದ ಡಾ. ಜೆನಿಫರ್ ಲೊಲಿಟಾ, ನ್ಯಾಕ್ ವಿಶೇಷಾಧಿಕಾರಿ ದೇವಿ ಪ್ರಸಾದ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT