ಭಾನುವಾರ, ಮಾರ್ಚ್ 7, 2021
27 °C

ಗೃಹರಕ್ಷಕರಿಗೆ ಕಿಟ್ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ನಗರ ದಕ್ಷಿಣ ಕ್ಷೇತ್ರದಲ್ಲಿ ಕಾರ್ಯಪ್ರವೃತ್ತರಾಗಿರುವ ಗೃಹರಕ್ಷಕ ದಳದ ಸಿಬ್ಬಂದಿಗೆ ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಡಾ.ಮುರಳಿ ಮೋಹನ ಚೂಂತಾರು ಅವರ ಮೂಲಕ ಉಚಿತ ಕಿಟ್ ವಿತರಿಸಲಾಯಿತು.

ಕೇಂದ್ರ ಸರ್ಕಾರ ಆಯುಷ್ ಇಲಾಖೆಯಿಂದ ಅನುಮೋದಿಸಲಾದ ಔಷಧಿಗಳನ್ನು ಇದೇ ಸಂದರ್ಭದಲ್ಲಿ ಭಾರತೀಯ ಹೋಮಿಯೋಪತಿ ವೈದ್ಯರ ಸಂಘದಿಂದ ಉಚಿತವಾಗಿ ನೀಡಲಾಯಿತು.

ಮೇಯರ್‌ ದಿವಾಕರ್, ಬಿಜೆಪಿ ದಕ್ಷಿಣ ಮಂಡಲ ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ ಚಾಲನೆ ನೀಡಿದರು. ಪದಾಧಿಕಾರಿಗಳಾದ ರೂಪ ಡಿ ಬಂಗೇರ, ಸುರೇಂದ್ರ ಜೆ., ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಪೂರ್ಣಿಮಾ, ಬಿಜೆಪಿ ಮುಖಂಡರಾದ ಭಾಸ್ಕರಚಂದ್ರ ಶೆಟ್ಟಿ, ರಮೇಶ್ ಕಂಡೆಟ್ಟು, ಗೃಹರಕ್ಷಕ ಉಪ ಕಮಾಂಡೆಂಟ್‌ ರಮೇಶ್, ಗೃಹರಕ್ಷಕ ಘಟಕಾಧಿಕಾರಿ ಮಾರ್ಕ್ ಶೆರಾ, ವೈದ್ಯರಾದ ಡಾ.ಪ್ರವೀಣ್ ಕುಮಾರ್ ರೈ, ಡಾ.ಅವಿನಾಶ್ ವಿ.ಎಸ್., ಡಾ. ಪ್ರವೀಣ್ ರಾಜ್ ಆಳ್ವ, ಡಾ. ಪ್ರಸನ್ನ ಕುಮಾರ್, ಡಾ. ರಾಮಕೃಷ್ಣ ರಾವ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು