ಬುಧವಾರ, ಜನವರಿ 27, 2021
18 °C

ಶ್ರೀಮತಿ ವಿಮಲಾ ವಿ. ಪೈ ಪುರಸ್ಕಾರ ಘೋಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಮಣಿಪಾಲ ಗ್ಲೋಬಲ್ ಎಜುಕೇಶನ್ ಸರ್ವಿಸಸ್ ಮುಖ್ಯಸ್ಥ ಟಿ.ವಿ.ಮೋಹನದಾಸ ಪೈ ಪ್ರಾಯೋಜಕತ್ವದ ‘ಶ್ರೀಮತಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಅತ್ಯುತ್ತಮ ಕೊಂಕಣಿ ಪುಸ್ತಕ ಪುರಸ್ಕಾರ -2020’ ಕ್ಕಾಗಿ ಗೋವಾದ ಕೊಂಕಣಿ ಲೇಖಕ ಕೆ.ಎಂ. ಸುಖತಣಕರ ಅವರ ‘ಘುಮಕ್ಯಾರ ಘುಮಕೆ’ ಕಾದಂಬರಿ ಆಯ್ಕೆಗೊಂಡಿದೆ.

‘ಶ್ರೀಮತಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಅತ್ಯುತ್ತಮ ಕೊಂಕಣಿ ಕವಿತಾ ಕೃತಿ ಪುರಸ್ಕಾರ-2020’ ಕ್ಕೆ ಮುಂಬೈನ ಶೈಲೇಂದ್ರ ಮೆಹತಾ ಅವರ ‘ಸಿಸಫಸ್ ತೆಂಗಸರ್’ ಕವನ ಸಂಕಲನ ಆಯ್ಕೆಯಾಗಿದೆ. ಹಿರಿಯ ಖ್ಯಾತ ಕೊಂಕಣಿ ಸಾಹಿತ್ಯಕಾರ ಕುಮಟಾದ ಡಾ. ಶಿವರಾಮ ಕಾಮತ್ ಅವರು ‘ಶ್ರೀಮತಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಜೀವನ ಸಿದ್ಧಿ ಪುರಸ್ಕಾರ-2020’ ಕ್ಕೆ ಆಯ್ಕೆಯಾಗಿದ್ದಾರೆ.

ಈ ಮೂರು ಪ್ರಶಸ್ತಿಗಳೂ ತಲಾ ₹1 ಲಕ್ಷ ನಗದು ಹಾಗೂ ಸನ್ಮಾನ ಪತ್ರ, ಸ್ಮರಣಿಕೆ ಒಳಗೊಂಡಿದೆ ಎಂದು ವಿಶ್ವ ಕೊಂಕಣಿ ಕೇಂದ್ರದ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.