ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಟೆಕಾರು ಪಟ್ಟಣ ಪಂಚಾಯಿತಿ: ಅಧ್ಯಕ್ಷರಾಗಿ ಬಿಜೆಪಿಯ ದಿವ್ಯಾ ಸತೀಶ್ ಶೆಟ್ಟಿ ಆಯ್ಕೆ

Published : 29 ಆಗಸ್ಟ್ 2024, 12:39 IST
Last Updated : 29 ಆಗಸ್ಟ್ 2024, 12:39 IST
ಫಾಲೋ ಮಾಡಿ
Comments

ಉಳ್ಳಾಲ: ಕೋಟೆಕಾರು ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಬಿಜೆಪಿಯ ದಿವ್ಯಾ ಸತೀಶ್ ಶೆಟ್ಟಿ ಹಾಗೂ ಉಪಾಧ್ಯಕ್ಷರಾಗಿ ಅದೇ ಪಕ್ಷದ ಪ್ರವೀಣ್ ಬಗಂಬಿಲ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ– ಉಪಾಧ್ಯಕ್ಷರ ಆಯ್ಕೆಗಾಗಿ ಗುರುವಾರ ನಡೆದ ಮತದಾನದಲ್ಲಿ ದಿವ್ಯಾ ಸತೀಶ್ ಶೆಟ್ಟಿ 12 ಮತಗಳನ್ನು ಪಡೆದು ಪ್ರತಿಸ್ಪರ್ಧಿಯಾಗಿದ್ದ ಪಕ್ಷೇತರ ಅಭ್ಯರ್ಥಿ ಹರೀಶ್ ರಾವ್ ಅವರನ್ನು 6 ಮತಗಳ ಅಂತರದಲ್ಲಿ ಸೋಲಿಸಿದರು. ಪ್ರವೀಣ್ ಬಗಂಬಿಲ 12 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ಮಹಮ್ಮದ್ ಅಜ್ಜಿನಡ್ಕ ಅವರನ್ನು 6 ಮತಗಳ ಅಂತರದಲ್ಲಿ ಸೋಲಿಸಿದರು.

17 ಸದಸ್ಯರನ್ನು ಹೊಂದಿರುವ ಕೋಟೆಕಾರು ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ 11 ಸದಸ್ಯರನ್ನು ಹೊಂದಿದೆ. ಚುನಾವಣೆಯಲ್ಲಿ ಸಂಸದ ಬ್ರಿಜೇಶ್ ಚೌಟ ಅವರೂ ಮತದಾನ ಮಾಡಿದ್ದರಿಂದ ಬಿಜೆಪಿಗೆ 12 ಮತಗಳು ಬಿದ್ದಿವೆ. ಕಾಂಗ್ರೆಸ್ ನ 4 ಸದಸ್ಯರು, ಒಬ್ಬ ಪಕ್ಷೇತರ ಮತ್ತು ಎಸ್‌ಡಿಪಿಐನ ತಲಾ ಒಬ್ಬರು ಸದಸ್ಯರಿದ್ದಾರೆ,

ಕೋಟೆಕಾರು ಪಟ್ಟಣ ಪಂಚಾಯಿತಿಯಾಗಿ ಮೆಲ್ದರ್ಜೆಗೆ ಏರಿದ ಬಳಿಕ ನಡೆದ ಎರಡನೇ ಚುನಾವಣೆ ಇದಾಗಿದ್ದು, ಎರಡೂ ಅವಧಿಯಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT