ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಂತಾಡಿಯಲ್ಲಿ ಕುದ್ರೋಳಿ ಗುರು ಬೆಳದಿಂಗಳು ಸಂಘಟನೆಯಿಂದ ‘ಗುರುವನ’ ಲೋಕಾರ್ಪಣೆ

ಸರಣಿ ಔಷಧೀಯ ಸಸಿ ನೆಡುವ ಕಾರ್ಯಕ್ರಮದ ಸಮಾರೋಪ
Last Updated 6 ಸೆಪ್ಟೆಂಬರ್ 2021, 17:36 IST
ಅಕ್ಷರ ಗಾತ್ರ

ಬಂಟ್ವಾಳ/ವಿಟ್ಲ: ‘ಮುಂದಿನ ಜನಾಂಗಕ್ಕೆ ಪರಿಶುದ್ಧ ಗಾಳಿ ಮತ್ತು ನೀರು ನೀಡುವುದರ ಜೊತೆಗೆ ಪರಿಸರ ಸಂರಕ್ಷಣೆಗಾಗಿ ಸಸ್ಯಗಳನ್ನು ಬೆಳೆಸಬೇಕು. ಗುರು ಬೆಳದಿಂಗಳು ಸಂಘಟನೆ ಪ್ರಕೃತಿಗೆ ಬೆಳಕು ಚೆಲ್ಲುವ ಕಾಯಕದಲ್ಲಿ ತೊಡಗಿದೆ’ ಎಂದು ಹಿಂದುಳಿದ ವರ್ಗಗಳ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕುದ್ರೋಳಿ ಗುರು ಬೆಳದಿಂಗಳು ಸಂಘಟನೆ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 167ನೇ ಜನ್ಮ ಜಯಂತಿ ಪ್ರಯುಕ್ತ ಅನಂತಾಡಿ ಬಾಕಿಲಗುತ್ತು ಉಳ್ಳಾಲ್ತಿ ವೈದ್ಯನಾಥೇಶ್ವರ ಕ್ಷೇತ್ರ, ಬ್ರಹ್ಮ ಬೈದರ್ಕಳ ಗರಡಿ ಬಳಿ ಸೋಮವಾರ ನಡೆದ ಸರಣಿ ಔಷಧೀಯ ಸಸಿ ನೆಡುವ ಕಾರ್ಯಕ್ರಮದ ಸಮಾರೋಪ ಮತ್ತು 167 ಗಿಡಗಳ ‘ಗುರುವನ’ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ‘ಸಂಘ ಸಂಸ್ಥೆಗಳು ಬೆಳೆಯಬೇಕಾದರೆ ನಿಸ್ವಾರ್ಥ ಮನೋಭಾವ ಬೇಕು. ಈ ನಿಟ್ಟಿನಲ್ಲಿ ಗುರುಬೆಳದಿಂಗಳು ಸಂಘಟನೆ ಬೆಳೆಯಲಿ’ ಎಂದರು.

ಮಾಜಿ ಸಚಿವ ಬಿ.ರಮಾನಾಥ ರೈ, ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್ ಮಾತನಾಡಿದರು. ಗುರು ಬೆಳದಿಂಗಳು ಅಧ್ಯಕ್ಷ ಆರ್. ಪದ್ಮರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಪರಿಸರಪ್ರೇಮಿ ಮಾಧವ ಉಳ್ಳಾಲ್, ಸಮಾಜ ಸೇವಕ ರೋಹಿದಾಸ್ ಅವರನ್ನು ಗೌರವಿಸಲಾಯಿತು.

ಬಂದರು, ಮೀನುಗಾರಿಕಾ ಮತ್ತು ಒಳನಾಡು ಸಾರಿಗೆ ಸಚಿವ ಎಸ್. ಅಂಗಾರ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಕುದ್ರೋಳಿ ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೆಂದ್ರ ಪೂಜಾರಿ, ಅನಂತಾಡಿ ಗರಡಿ ಆಡಳಿತ ಮಂಡಳಿ ಅಧ್ಯಕ್ಷ ವಸಂತ ಪೂಜಾರಿ, ಉಪಾಧ್ಯಕ್ಷ ಹರೀಶ್ ಸುವರ್ಣ, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಡಾ.ರಾಜಾರಾಮ್, ಗುರು ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಜಯಾನಂದ, ಗುರುಬೆಳದಿಂಗಳು ಸಂಸ್ಥೆ ಉಪಾಧ್ಯಕ್ಷ ರಘುನಾಥ ಮಾಬಿಯಾನ್, ಮಾರ್ಗದರ್ಶಕ ಕಿಶೋರ್ ದಂಡೆಕೇರಿ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಅನಿಲ್ ಕುಮಾರ್, ನೇರಳಕಟ್ಟೆ ಸೊಸೈಟಿ ಅಧ್ಯಕ್ಷ ಪುಷ್ಪರಾಜ್ ಚೌಟ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮಾಧವ ಎಸ್.ಮಾವೆ, ಅನಂತಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗಣೇಶ್ ಪೂಜಾರಿ, ಉಪಾಧ್ಯಕ್ಷ ಕುಸುಮಾಧರ, ಮಾಜಿ ಅಧ್ಯಕ್ಷ ಸನತ್ ಕುಮಾರ್ ರೈ, ಶಿವಗಿರಿ ಮಹಿಳಾ ಸಹಕಾರಿ ಸಂಘ ಅಧ್ಯಕ್ಷೆ ಜಯಂತಿ ಪೂಜಾರಿ, ಸಾಮಾಜಿಕ ಕಾರ್ಯಕರ್ತ ಸತೀಶ್ ಗುರುನಗರ, ಗುರು ಚಾರಿಟಬಲ್ ಟ್ರಸ್ಟ್ ಮಾಜಿ ಅಧ್ಯಕ್ಷ ಚಂದ್ರಶೇಖರ್ ನಾನಿಲ್, ಗೆಜ್ಜೆಗಿರಿ ನಂದನ ಬಿತ್ತಿಲ್‌ ಕ್ಷೇತ್ರದ ಅಧ್ಯಕ್ಷ ಜಯಂತ ನಡುಬೈಲ್, ಪ್ರಧಾನ ಕಾರ್ಯದರ್ಶಿ ರವಿ ಚಿಲಿಂಬಿ, ರಾಜೇಶ್ ಸುವರ್ಣ, ದಿನೇಶ್ ಸುವರ್ಣ ರಾಯಿ ಇದ್ದರು.

9 ಕಡೆ ಔಷಧೀಯ ಸಸಿಗಳ ನಾಟಿ

ಗೆಜ್ಜೆಗಿರಿ ನಂದನ ಬಿತ್ತಿಲ್‌ ಕ್ಷೇತ್ರ, ಉಳ್ಳಾಲ ಜುಮ್ಮಾ ಮಸೀದಿ, ಸಯ್ಯಿದ್ ಮದನಿ ದರ್ಗಾ, ಮೂಲ್ಕಿ ಚಂದ್ರನಾಥ ಸ್ವಾಮಿ ಬಸದಿ, ಕಾಪಿಕಾಡ್ ಶ್ರೀಗುರು ವೈದ್ಯನಾಥ ಚಾಮುಂಡೇಶ್ವರಿ ದೈವಸ್ಥಾನ, ಕಟಪಾಡಿ ವಿಶ್ವನಾಥ ಕ್ಷೇತ್ರ, ಸೇಂಟ್ ಜೋಸೆಫ್ ಸೆಮಿನರಿ ಜೆಪ್ಪು, ಕಂಕನಾಡಿ ಬ್ರಹ್ಮ ಬೈದರ್ಕಳ ಗರೋಡಿ, ಗುರುದ್ವಾರ ಸಾಹಿಬ್ ಕೋಡಿಕಲ್‌ನಲ್ಲಿ ಸರಣಿ ಕಾರ್ಯಕ್ರಮದಲ್ಲಿ ಔಷಧೀಯ ಸಸ್ಯ ನಡೆಸಲಾಗಿದೆ. ಅನಂತಾಡಿ ಉಳ್ಳಾಲ್ತಿ ವೈದ್ಯನಾಥೇಶ್ವರ ಕ್ಷೇತ್ರ, ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಬ್ರಹಶ್ರೀ ನಾರಾಯಣ ಗುರುಗಳ 167ನೇ ಜಯಂತಿಯ ಪ್ರಯುಕ್ತ ಅಳಿವಿನಂಚಿನಲ್ಲಿರುವ 167 ಔಷಧೀಯ ಸಸಿಗಳನ್ನು ‘ಗುರುವನ’ದಲ್ಲಿ ನೆಡಲಾಗಿದೆ’ ಎಂದು ಗುರು ಬೆಳದಿಂಗಳು ಅಧ್ಯಕ್ಷ ಆರ್. ಪದ್ಮರಾಜ್ ತಿಳಿಸಿದರು.

****

ಔಷಧೀಯ ಸಸಿಗಳನ್ನು ನೆಡುವ ಜತೆಗೆ ಅವುಗಳಿಗೆ ರಕ್ಷಣಾ ಬೇಲಿಯನ್ನು ಕೂಡ ಅಳವಡಿಸಲಾಗಿದೆ. ಅವುಗಳನ್ನು ಪೋಷಿಸಲು ಯೋಜನೆ ರೂಪಿಸಲಾಗಿದೆ.
ಆರ್. ಪದ್ಮರಾಜ್, ಅಧ್ಯಕ್ಷ, ಗುರು ಬೆಳದಿಂಗಳು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT