ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪಿನಲ್ಲಿ ಸಂಘರ್ಷ; ಕೇಸರಿಯಲ್ಲಿ ಚಿಂತನೆ

ಬಿಎಂಎಸ್‌ ದಕ್ಷಿಣ ಕನ್ನಡ–ಉಡುಪಿ ಕುಟುಂಬ ಮಿಲನ ಸಮಾವೇಶದಲ್ಲಿ ಸುರೇಂದ್ರನ್
Last Updated 14 ನವೆಂಬರ್ 2022, 5:49 IST
ಅಕ್ಷರ ಗಾತ್ರ

ಮಂಗಳೂರು: ‘ಕೆಂಪು ಪತಾಕೆ ಹಿಡಿದುಕೊಂಡು ಕಾರ್ಮಿಕ ಸಂಘಟನೆ ಕಟ್ಟಿಕೊಂಡವರು ಸಂಘರ್ಷಗಳನ್ನು ಮಾಡಿದರೇ ಹೊರತು ಕಾರ್ಮಿಕರ ಹಿತ ಕಾಯಲಿಲ್ಲ. ಆದರೆ ಕೇಸರಿ ಬಣ್ಣದ ಧ್ವಜ ಹಿಡಿದು ಹೋರಾಟಕ್ಕೆ ಇಳಿದವರು ಹೊಸ ಚಿಂತನೆ ಮತ್ತು ಸದುದ್ದೇಶ ಹೊಂದಿದ್ದರು’ ಎಂದು ಭಾರತೀಯ ಮಜ್ದೂರ್ ಸಂಘದ (ಬಿಎಂಎಸ್‌) ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಬಿ. ಸುರೇಂದ್ರನ್ ಅಭಿಪ್ರಾಯಪಟ್ಟರು.

ನಗರದ ಸಂಘನಿಕೇತನದಲ್ಲಿ ಬಿಎಂಎಸ್‌ ಭಾನುವಾರ ಆಯೋಜಿ
ಸಿದ್ದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕಾರ್ಯಕರ್ತರ ‘ಕುಟುಂಬ ಮಿಲನ’ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಿಎಂಎಸ್‌ ಹೊಸ ದೃಷ್ಟಿಕೋನ
ದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಆದರೂ ಕೋವಿಡ್ ನಂತರ ಸಮಾಜದಲ್ಲಿ ಉಂಟಾಗಿರುವ ಬದಲಾವಣೆಗೆ ತಕ್ಕಂತೆ ಕಾರ್ಯಶೈಲಿಯನ್ನು ಬದಲಿಸಿಕೊಳ್ಳಬೇಕಾದ ಅಗತ್ಯವಿದೆ. ಬೃಹತ್ ಕಂಪನಿಗಳಿಂದಾಗಿ ಸಣ್ಣ ಕೈಗಾರಿಕೆಗಳ ಕಾರ್ಮಿಕರಿಗೆ ತೊಂದರೆ
ಯಾಗುತ್ತಿದೆ. ಇದನ್ನು ತಡೆಯಲು ಪೂರ್ಣಾವಧಿ ಕಾರ್ಯಕರ್ತರನ್ನು ಸೃಷ್ಟಿಸಬೇಕಾದ ಅಗತ್ಯವಿದೆ ಎಂದು ಅವರು ಸಲಹೆ ನೀಡಿದರು.

ಸಮಾವೇಶ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ ‘ಬಿಎಂಎಸ್‌ ಸಂಘಟನೆಯಿಡೀ ಕುಟುಂಬದಂತೆ ಇದ್ದು ಭಾರತ ಮಾತೆಯ ವೈಭವ ಮತ್ತು ಗೌರವ ಎತ್ತಿಹಿಡಿಯುವುದು ಇದರ ಪರಮ ಗುರಿ’ ಎಂದರು. ಯಾವ ಸ್ಥಾನದಲ್ಲಿದ್ದರೂ ತಾವು ಬಿಎಂಎಸ್ ಕಾರ್ಯಕರ್ತನೇ ಆಗಿರುವೆ ಎಂದು ಹೇಳಿದ ಅವರು, ತಮ್ಮದೇ ಪಕ್ಷ ಕಾರ್ಮಿಕ ವಿರೋಧಿ ನೀತಿ ಅನುಸರಿಸಿದಾಗ ಸಿಡಿದೆದ್ದಿರುವುದಾಗಿ ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕುಟುಂಬ ಮಿಲನದ ಸಂಚಾಲಕ ವಿಶ್ವನಾಥ ಶೆಟ್ಟಿ ಕಮ್ಯುನಿಸ್ಟರ ಪ್ರಾಬಲ್ಯ
ವಿದ್ದ ಸಂಘಟನೆಯಿಂದ ಹೊರಬಂದ ರಾಷ್ಟ್ರೀಯವಾದಿ ಮನಸ್ಥಿತಿಯ ಕಾರ್ಮಿಕರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಮಿಕರಿಗೆ ಸಾಕಷ್ಟು ಅನುಕೂಲ ಒದಗಿಸಿಕೊಟ್ಟಿದ್ದಾರೆ ಎಂದರು.

‘ರಾಜಕಾರಣಿಗಳಿಂದ ಮನ್ನಣೆ ಇಲ್ಲ’

ಕಾರ್ಮಿಕರಿಗೆ ಮತ್ತು ಕಾರ್ಮಿಕ ಸಂಘಟನೆಗಳಲ್ಲಿ ದುಡಿದವರಿಗೆ ರಾಜಕಾರಣಿಗಳು ಮನ್ನಣೆ ನೀಡಿಲ್ಲ, ಈಗ ನೀಡುವುದೂ ಇಲ್ಲ ಎಂದು ವಿಶ್ವನಾಥ್ ಶೆಟ್ಟಿ ಆರೋಪಿಸಿದರು.

ಆಮಂತತ್ರಣ ಪತ್ರಿಕೆಯಲ್ಲಿ ಆಡಳಿತ ಪಕ್ಷದ ಸಂಸದರು, ಸಚಿವರು, ಶಾಸಕರ ಹೆಸರು ಮುದ್ರಿಸಲಾಗಿತ್ತು. ಆದರೆ ಆ ಪೈಕಿ ಬಂದಿದ್ದು ಒಬ್ಬರು ಮಾತ್ರ. ಇದನ್ನು ಪ್ರಸ್ತಾಪಿಸಿದ ವಿಶ್ವನಾಥ್‌ ‘ಇಂಥ ಕಾರ್ಯಕ್ರಮಗಳಿಗೆ ಯಾರೂ ಬರುವುದಿಲ್ಲ. ನಾವು ಓಟು ತರುವವರಲ್ಲ. ಆದ್ದರಿಂದ ಅವರ್ಯಾರಿಗೂ ನಮ್ಮ ಅಗತ್ಯವಿಲ್ಲ’ ಎಂದು ಗುಡುಗಿದರು. ಬಿಎಂಎಸ್‌ ಯಾವುದೇ ಪಕ್ಷದ ಪರವಾಗಿಲ್ಲ. ನಮ್ಮ ಸಭೆಗಳಲ್ಲಿ ನಿರ್ದಿಷ್ಟ ಪಕ್ಷಕ್ಕೆ ಮತ ಹಾಕಿ ಎಂದು ಹೇಳಿದ ಚರಿತ್ರೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಕೆಎಸ್‌ಆರ್‌ಟಿಸಿಗೆ ಸಂಬಂಧಿಸಿದ ಒಪ್ಪಂದವೊಂದಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಬಿಜೆಪಿ ರಾಜ್ಯ ವಕ್ತಾರ ಸ್ಥಾನ ಕಳೆದುಕೊಳ್ಳಬೇಕಾಯಿತು ಎಂದು ಶಾಸಕ ಆಯನೂರು ಮಂಜುನಾಥ ಬೇಸರ ವ್ಯಕ್ತಪಡಿಸಿದರು.

ಬಿಎಂಎಸ್‌ ದಕ್ಷಿಣ ಮತ್ತು ದಕ್ಷಿಣ ಕೇಂದ್ರ ಸಂಘಟನಾ ಕಾರ್ಯದರ್ಶಿ ದುರೈರಾಜ್, ಕರ್ನಾಟಕ ಘಟಕದ ಪ್ರಧಾನ ಕಾರ್ಯದರ್ಶಿ ಎಚ್‌.ಎಲ್‌. ವಿಶ್ವನಾಥ್‌, ಕುಟುಂಬ ಮಿಲನದ ಸ್ವಾಗತ ಸಮಿತಿ ಅಧ್ಯಕ್ಷ ಸತೀಶ್ ಶೆಟ್ಟಿ, ಕಾರ್ಯದರ್ಶಿ ಭಗವಾನ್ ದಾಸ್ ಬಿ.ಎನ್‌, ರಾಜೀವನ್ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT