ಪಟ್ಟೋರಿ: 42ನೇ ವರ್ಷದ ಏಕಾಹ ಭಜನೆಗೆ ಚಾಲನೆ

ಮುಡಿಪು: ಕೊಣಾಜೆ ಗ್ರಾಮದ ಪಟ್ಟೋರಿಯ ನಾಗಬ್ರಹ್ಮ ಭಜನಾ ಮಂಡಳಿ ವತಿಯಿಂದ 42ನೇ ವರ್ಷದ ಏಕಾಹ ಭಜನೆ ಶನಿವಾರ ಆರಂಭಗೊಂಡಿತು.
ಕೊಣಾಜೆ ಬೀಡು ಸತ್ಯನಾರಾಯಣ ಭಟ್ ದೀಪ ಪ್ರಜ್ವಲನೆ ಮಾಡಿದರು. ಶ್ರೀನಿವಾಸ ಕಾಜವ ಪಟ್ಟೋರಿ, ದಿವಾಕರ ಭಂಡಾರಿ, ಕರುಣಾಕರ ಕಾನ, ಬಂಟು ಕೆ. ಕಾಟುಕೋಡಿ, ಬೂಬ ಪುಲ್ಲು, ರಾಮಕೃಷ್ಣ ಪಟ್ಟೋರಿ, ಭಜನಾ ಮಂಡಳಿ ಅಧ್ಯಕ್ಷ ರಾಧಾಕೃಷ್ಣ ಕಲಾಯಿ, ಪ್ರಧಾನ ಕಾರ್ಯದರ್ಶಿ ಯತೀಶ್ ಮದಕ ಹಾಗೂ ಭಜನಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಏಕಾಹ ಭಜನೆಯು ವಿವಿಧ ಭಜನಾ ಮಂಡಳಿಗಳ ಉಪಸ್ಥಿತಿಯೊಂದಿಗೆ ಭಾನುವಾರದವರೆಗೆ ನಡೆಯಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.