ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರು ಸೇವೆಗೆ ಆದ್ಯತೆ ನೀಡಲಿ: ವಿನಯ್ ಹೆಗ್ಡೆ

Published 1 ಜುಲೈ 2023, 14:06 IST
Last Updated 1 ಜುಲೈ 2023, 14:06 IST
ಅಕ್ಷರ ಗಾತ್ರ

ಉಳ್ಳಾಲ: ಹಣ ಮುಖ್ಯವಾಗಿದ್ದರೂ ವೈದ್ಯರು ಸೇವೆಗೆ ಆದ್ಯತೆ ನೀಡಬೇಕು. ಮಕ್ಕಳಿಗೆ ಸೂಕ್ತವಾಗುವುದನ್ನೇ ಹೆತ್ತವರು ಕಲಿಸಬೇಕು ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್.ವಿನಯ್ ಹೆಗ್ಡೆ ಅಭಿಪ್ರಾಯಪಟ್ಟರು.

ಅವರು ದೇರಳಕಟ್ಟೆ ಜಸ್ಟೀಸ್ ಕೆ.ಎಸ್ ಹೆಗ್ಡೆ ಚಾರಿಟಬಲ್ ಆಸ್ಪತ್ರೆ ಆವಿಷ್ಕಾರ ಸಭಾಂಗಣದಲ್ಲಿ ಆಯೋಜಿಸಿದ್ದ ವೈದ್ಯರ ದಿನಾಚರಣೆಯಲ್ಲಿ ಹಿರಿಯ ವೈದ್ಯರನ್ನು ಸನ್ಮಾನಿಸಿ ಮಾತನಾಡಿದರು.

ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಸಹಕುಲಾಧಿಪತಿ ಡಾ.ಎಂ. ಶಾಂತರಾಮ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು. ಕುಲಪತಿ ಡಾ.ಎಂ.ಎಸ್ ಮೂಡಿತ್ತಾಯ, ಸೇವಾ ವಿಭಾಗದ ಉಪಾಧ್ಯಕ್ಷ ಡಾ.ಸತೀಶ್ ಕುಮಾರ್ ಭಂಡಾರಿ, ಕುಲಸಚಿವ ಡಾ.ಹರ್ಷ ಹಾಲಹಳ್ಳಿ, ಉಪ ಡೀನ್ ಅಮೃತ್ ಮಿರಾಜ್ ಕರ್ ಇದ್ದರು.

ದಾವಣಗೆರೆ ಜೆಜೆಎಂ ಕಾಲೇಜಿನ ಡಾ.ಶುಕ್ಲ ಎಸ್. ಶೆಟ್ಟಿ, ಉಜಿರೆಯ ಡಾ.ಎನ್.ಬಾಲಕೃಷ್ಣ ಭಟ್, ಮಂಜೇಶ್ವರದ ಡಾ.ಎಂ.ಜಯಪಾಲ್ ಶೆಟ್ಟಿ, ಉಳ್ಳಾಲದ ಡಾ.ಎಂ ಸದಾಶಿವ್ ಪೊಳ್ನಾಯ ಅವರನ್ನು ಸನ್ಮಾನಿಸಲಾಯಿತು. ಡಾ.ಲಕ್ಷ್ಮಿ ಮಂಜೀರಾ ಎನ್, ಡಾ.ಸಂದೀಪ್ ರೈ, ಡಾ. ಅಭಿಜಿತ್ ಶೆಟ್ಟಿ, ಡಾ.ಶ್ರೀನಿವಾಸ್ ಭಟ್ ಸನ್ಮಾನಿತರ ವಿವರ ಓದಿದರು. ಡಾ.ಜಯಪ್ರಕಾಶ್ ಶೆಟ್ಟಿ ಸ್ವಾಗತಿಸಿದರು. ವೈದ್ಯಕೀಯ ಅಧೀಕ್ಷಕಿ ಡಾ.ಸುಮಲತಾ ಆರ್ ಶೆಟ್ಟಿ ವಂದಿಸಿದರು. ನಿಶಾ ಶೆಟ್ಟಿ ಮತ್ತು ಸ್ವಾತಿ ರಾವ್ ನಿರೂಪಿಸಿದರು.

'ಉತ್ತಮ ಶಿಕ್ಷಕ ಉತ್ತಮ ವಿದ್ಯಾರ್ಥಿ ಯನ್ನು ಬೆಳೆಸಲು ಸಾಧ್ಯವಾದಲ್ಲಿ, ಉತ್ತಮ ವಿದ್ಯಾರ್ಥಿ ಉತ್ತಮ ಶಿಕ್ಷಕನನ್ನು ರೂಪಿಸಲು ಸಾಧ್ಯ. ಪ್ರತಿದಿನ ನಾವೀನ್ಯತೆಗಳು ಎದುರಾಗುವುದರಿಂದ, ಹಿರಿಯ ವೈದ್ಯರೊಂದಿಗಿನ ಚರ್ಚೆ ಕ್ಷೇತ್ರದಲ್ಲಿ ಬೆಳೆಸಿದೆ..'
ಡಾ.ಶುಕ್ಲ ಎಸ್. ಶೆಟ್ಟಿ

'ದಿನಾಚರಣೆಗಳಂದು ದಿನಗಳ ಉದ್ದೇಶ ಅವಲೋಕನವಾಗಬೇಕಿದೆ. ಈ ಸಂದರ್ಭ ಬಂದ ದಾರಿಗಳಲ್ಲಿನ ತಪ್ಪು ಗಳ , ಸರಿಗಳ ಆತ್ಮಾವಲೋಕನಗಳು ಆಗಬೇಕಿದೆ. ಕೇರಳದಲ್ಲಿ 280 ವೈದ್ಯರ ಮೇಲೆ ಹಲ್ಲೆ ಪ್ರಕರಣಗಳು ದಾಖಲಾಗಿವೆ. ಇದನ್ನು ಐಎಂಎ ಕಠಿಣವಾಗಿ ಎದುರಿಸಿ ತಪ್ಪಿತಸ್ಥರಿಗೆ ಜಾಮೀನುರಹಿತ ಶಿಕ್ಷೆಯಾಗುವಂತೆ ಹೋರಾಡುತ್ತಿದೆ. ವೈದ್ಯರ ತಪ್ಪುಗಳು ಬೇಕೂಂತಲೇ ಆಗುವುದಿಲ್ಲ, ಅನಿವಾರ್ಯದಿಂದ ಆಗುವುದು ಸಹಜ. ಸಮಾಜದಲ್ಲಿ ವೈದ್ಯರ ಒಗ್ಗಟ್ಟು ಇರಬೇಕು'.
ಡಾ.ಎಂ.ಜಯಪಾಲ್ ಶೆಟ್ಟಿ

'ಕಾಲ ಬದಲಾದಂತೆ ವೈದ್ಯಕೀಯ ಶಿಕ್ಷಣ ಸಂಪೂರ್ಣ ಬದಲಾಗಿದೆ. ನಾವೀನ್ಯತೆಗಳನ್ನು ಅಳವಡಿಸದೇ ಇದ್ದಲ್ಲಿ ಕ್ಷೇತ್ರ ದಲ್ಲಿ ಕಾರ್ಯಾಚರಣೆ ಕಷ್ಟ. ಪ್ರತಿದಿನದ ಓದು ಜೀವನದಲ್ಲಿ ಯಶಸ್ಸು ತರಿಸಲು ಸಹಕಾರಿ' .
ಡಾ.ಎಂ ಸದಾಶಿವ್ ಪೊಳ್ನಾಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT