ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

17 ದಿನಗಳಲ್ಲಿ 3 ಸಾವಿರ ಮಂದಿಗೆ ನೆರವು

Last Updated 2 ನವೆಂಬರ್ 2021, 14:58 IST
ಅಕ್ಷರ ಗಾತ್ರ

ಮೂಲ್ಕಿ: ‘ಕೋವಿಡ್‌ ಸಂದರ್ಭದಲ್ಲಿ ಮುಂಬೈ ಹಾಗೂ ಇನ್ನಿತರ ಕಡೆಗಳಿಂದ ನಗರಕ್ಕೆ ಬಂದ 3 ಸಾವಿರ ಪ್ರಯಾಣಿಕರನ್ನು ಮೂಲ್ಕಿ ಲಯನ್ಸ್‌ ಕ್ಲಬ್ ವತಿಯಿಂದ ರೈಲು ನಿಲ್ದಾಣದಲ್ಲೇ ಪರೀಕ್ಷೆಗೆ ಒಳಪಡಿಸಿ, ಅವರಿಗೆ ಉಪಾಹಾರದ ವ್ಯವಸ್ಥೆ ಕಲ್ಪಿಸಿದ ಕಾರ್ಯ ದೇಶದಲ್ಲಿಯೇ ವಿಭಿನ್ನವಾಗಿದೆ’ ಎಂದು ಲಯನ್ಸ್ ಗವರ್ನರ್‌ ವಸಂತಕುಮಾರ್‌ ಶೆಟ್ಟಿ ಹೇಳಿದರು.

ಮೂಲ್ಕಿ ಲಯನ್ಸ್‌ ಕ್ಲಬ್‌ಗೆ ಮಂಗಳವಾರ ಭೇಟಿ ನೀಡಿದ ಅವರು, ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

’3 ತಿಂಗಳಲ್ಲಿ 10 ಹೊಸ ಕ್ಲಬ್‌ಗಳನ್ನು ಆರಂಭಿಸಲಾಗಿದೆ. ಮಂಗಳೂರಿನ ವೆನ್ಲಾಕ್‌ನಲ್ಲಿ ಕೃತಕ ಕಾಲು ಜೋಡಣೆಯ ಕೇಂದ್ರವನ್ನು ₹20 ಲಕ್ಷ ವೆಚ್ಚದಲ್ಲಿ ಆಧುನೀಕರಗೊಳಿಸಲಾಗುತ್ತಿದೆ. ಹೊರರೋಗಿಗಳ ಊಟದ ವ್ಯವಸ್ಥೆಗಾಗಿ ಮೊಬೈಲ್ ಕ್ಯಾಂಟಿನ್‌ ಆರಂಭಿಸಲು ₹8 ಲಕ್ಷ ವೆಚ್ಚದ ಯೋಜನೆ ರೂಪಿಸಲಾಗಿದೆ. ₹30 ಲಕ್ಷ ವೆಚ್ಚದಲ್ಲಿ ಡಯಾಲಿಸಿಸ್ ತಪಾಸಣಾ ಕೇಂದ್ರವನ್ನು ತೆರೆಯಲಾಗುತ್ತದೆ. ಬಂಟ್ವಾಳದಲ್ಲಿ ₹5.5 ಲಕ್ಷ ಮೊತ್ತದಲ್ಲಿ ಹೆದ್ದಾರಿಯಲ್ಲಿ ಸಾಲುಮರಗಳನ್ನು ನೆಡಲಾಗಿದೆ’ ಎಂದರು.

ಮೂಲ್ಕಿ ಲಯನ್ಸ್‌ ಕ್ಲಬ್‌ ಅಧ್ಯಕ್ಷ ವಿನೋದ್ ಸಾಲ್ಯಾನ್ ಬೆಳ್ಳಾಯ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷ ಸುಜಿತ್ ಸಾಲ್ಯಾನ್ ನೆರವಿನೊಂದಿಗೆ ಚೈತನ್ಯ ಬಡಗುಹಿತ್ಲು ಅವರಿಗೆ ಧನಸಹಾಯ ನೀಡಲಾಯಿತು. ಮೊಯಿದಿನ್ ಕುಂಞಿ ವೆಂಕಟೇಶ ಹೆಬ್ಬಾರ್, ಪ್ರತಿಭಾ ಹೆಬ್ಬಾರ್, ಸೃಜನ್ ಪುತ್ರನ್, ಮಂಜುನಾಥ್, ಕವನ್ ಕುಬೆವೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT