ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಹಿತಿಗಳಿಂದ ಸಮಾಜ ತಿದ್ದಲು ಸಾಧ್ಯ’

Last Updated 25 ಜುಲೈ 2021, 4:22 IST
ಅಕ್ಷರ ಗಾತ್ರ

ಮೂಲ್ಕಿ: ‘ಸಾಹಿತಿಗಳು ಹಾಗೂ ಶಿಕ್ಷಕರಿಗೆ ಹಳಿ ತಪ್ಪುವ ಸಮಾಜವನ್ನು ತಿದ್ದಲು ಸಾಧ್ಯವಿದೆ. ನಮ್ಮ ಶ್ರಮವನ್ನು ಸಮಾಜ ಗುರುತಿಸಿಕೊಳ್ಳುವಂತೆ ಬದುಕುವುದೇ ಸಾರ್ಥಕವೆನಿಸುತ್ತದೆ. ಸಾಧಕರ ಸಾಧನೆ ಮುಂದಿನ ಪೀಳಿಗೆಗೆ ಮುನ್ನುಡಿಯಾಗಬೇಕು’ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಕಿನ್ನಿಗೋಳಿಯ ‘ಯುಗಪುರುಷ’ದ ಸಂಸ್ಥಾಪಕ ದಿ. ಕೋ. ಉಡುಪರ ಸಂಸ್ಮರಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ಸಾಹಿತಿ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ದಿ. ಕೋ. ಉಡುಪರ ಸ್ಮರಣೆಯಲ್ಲಿ ನೀಡುವ ಪ್ರಶಸ್ತಿಯನ್ನು ಸಾಹಿತಿ ಸುಬ್ರಾಯ ಚೊಕ್ಕಾಡಿ ಅವರಿಗೆ ನೀಡಲಾಯಿತು. ವೇದ ವಿದ್ವಾಂಸರ ನೆಲೆಯಲ್ಲಿ ಪಕ್ಷಿಕೆರೆ ಸುರಗಿರಿ ದೇವಸ್ಥಾನದ ಪ್ರಧಾನ ಅರ್ಚಕ ವಿಶ್ವೇಶ್ ಭಟ್ ಅವರನ್ನು ಗೌರವಿಸಲಾಯಿತು.

ಸಾಹಿತಿ ಎಂ.ವಿ. ಭಟ್ ಅವರ ‘ಸುಖ ಜೀವನಕ್ಕೆ ಸರಳ ಮಾರ್ಗ’ಕೃತಿಯನ್ನು ಅನಾವರಣ ಗೊಳಿಸಲಾಯಿತು. ಕಟೀಲು ಕ್ಷೇತ್ರದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಕಸಾಪ ಘಟಕದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಶ್ರೀಪತಿ ಭಟ್ ಮೂಡುಬಿದಿರೆ, ಪೃಥ್ವಿರಾಜ ಆಚಾರ್ಯ ಕಿನ್ನಿಗೋಳಿ, ‘ಯುಗಪುರುಷ’ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ, ಯಕ್ಷ ಲಹರಿಯ ಗುರುಪ್ರಸಾದ್ ಭಟ್, ಶರತ್ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT