ಮಂಗಳೂರು: ವಾಟ್ಸ್ ಆ್ಯಪ್ಗೆ ಬಂದ ಎಪಿಕೆ ಫೈಲ್ ಡೌನ್ ಮಾಡಿದ ವ್ಯಕ್ತಿಯೊಬ್ಬರು ತಮ್ಮ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದು, ಈ ಬಗ್ಗೆ ಇಲ್ಲಿನ ಸೆನ್ ಅಪರಾಧ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

‘ನನ್ನ ಮೊಬೈಲ್ನ ವಾಟ್ಸ್ ಆ್ಯಪ್ಗೆ ಭಾನುವಾರ (ನ.24) ಅಪರಿಚಿತ ಸಂಖ್ಯೆಯಿಂದ ಸಂದೇಶ ಬಂದಿತ್ತು. ಅದರ ಜೊತೆ ವಾಹನ್.ಪರಿವಾಹನ್.ಎಪಿಕೆ ಪೂಲ್ ಕೂಡ ಇತ್ತು. ಆ ಫೈಲ್ನಲ್ಲಿ ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣ ದಾಖಲಾದ ಬಗ್ಗೆ ಮಾಹಿತಿ ಇತ್ತು. ಆ ಎಪಿಕೆ ಫೈಲ್ ಡೌನ್ಲೋಡ್ ಮಾಡಿದ ಕೂಡಲೇ ಮೊಬೈಲ್ಗೆ 16 ಒಟಿಪಿಗಳು ಬಂದಿವೆ. ಆ ಒಟಿಪಿಗಳನ್ನು ನಾನು ಯಾರ ಜೊತೆಗೂ ಹಂಚಿಕೊಂಡಿಲ್ಲ. ಆದರೂ ಫ್ಲಿಪ್ಕಾರ್ಟ್, ಅಮೆಜಾನ್ನಲ್ಲಿ ನನ್ನ ಕ್ರೆಡಿಟ್ ಕಾರ್ಡ್ ಬಳಸಿ ₹ 30,400, ಡೆಬಿಟ್ ಕಾರ್ಡ್ ಬಳಸಿ ₹ 16,700, ಪೇ ಲೇಟರ್ ಮೂಲಕ ₹71,496 ಹಣ ವರ್ಗಾವಣೆ ಆದ ಸಂದೇಶಗಳು ಮೊಬೈಲ್ಗೆ ಬಂದಿವೆ. ತಕ್ಷಣವೇ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಬ್ಲಾಕ್ ಮಾಡಿಸಿದ್ದೆ.’

‘ಆ ಬಳಿಕವೂ ಯಾರೋ ಅಪರಿಚಿತರು ನನ್ನ ಆಕ್ಸಿಸ್ ಬ್ಯಾಂಕ್ನ ಖಾತೆಯಲ್ಲಿದ್ದ ಹಣವನ್ನು ಬಳಸಿ ಫ್ಲಿಪ್ಕಾರ್ಟ್ನಲ್ಲಿ ₹ 39,398 ಮೌಲ್ಯದ ಒನ್ಪ್ಲಸ್ ಮೊಬೈಲ್, ₹ 32,098 ಮೊತ್ತದ ಮೊಟೊರೋಲಾ ಮೊಬೈಲ್, ₹ 12,800 ಮೌಲ್ಯ ಏರ್ಪಾಡ್ ಮೊಬೈಲ್ ಹಾಗೂ ತಲಾ ₹ 14,700 ಮತ್ತು ₹ 29ಸಾವಿರ ಮೌಲ್ಯದ ಫ್ಲಿಪ್ ಕಾರ್ಟ್ ವೋಚರ್ ಹಾಗೂ ಅಮೆಜಾನ್ನಲ್ಲಿ ₹ 3 ಸಾವಿರ ಮೌಲ್ಯ ಗಿಫ್ಟ್ ವೋಚರ್ಗಳನ್ನು ನವದೆಹಲಿಯ ವಿಳಾಸ ಬಳಸಿ ಖರೀದಿ ಮಾಡಿದ್ದಾರೆ. ನನ್ನ ಆಕ್ಸಿಸ್ ಬ್ಯಾಂಕ್ ಖಾತೆಯಿಂದ ಒಟ್ಟು ₹ 1,31,396 ಹಣವನ್ನು ಮೋಸದಿಂದ ವರ್ಗಾಯಿಸಲಾಗಿದೆ’ ಎಂದು ಸಂತ್ರಸ್ತ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.