ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರತ್ಕಲ್: ನೀನಾಸಂ ತಿರುಗಾಟ ನಾಟಕೋತ್ಸವಕ್ಕೆ ಚಾಲನೆ

Last Updated 8 ಜನವರಿ 2023, 7:05 IST
ಅಕ್ಷರ ಗಾತ್ರ

ಸುರತ್ಕಲ್‌: ಬದುಕಿನ ಅನುಭವಗಳ ಅಭಿವ್ಯಕ್ತಿಯಾದ ರಂಗಭೂಮಿಯು ಸಶಕ್ತ ಕಲಾ ಮಾಧ್ಯಮ ಎಂದು ಹಿಂದು ವಿದ್ಯಾದಾಯಿನಿ ಸಂಘದ ಕಾರ್ಯದರ್ಶಿ ಶ್ರೀರಂಗ ಹೊಸಬೆಟ್ಟು ಹೇಳಿದರು. ‌

ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಯಕ್ಷಗಾನ ಮತ್ತು ಲಲಿತಕಲಾ ಅಧ್ಯಯನ ಕೇಂದ್ರ, ಅರೆಹೊಳೆ ಪ್ರತಿಷ್ಠಾನ ಸಹಭಾಗಿತ್ವದಲ್ಲಿ ಪ್ರೊ.ಎಚ್.ಜಿ.ಕೆ. ರಾವ್ ದತ್ತಿನಿಧಿ, ವಿದ್ಯಾದಾಯಿನಿ ಹಳೆ ವಿದ್ಯಾರ್ಥಿ ಸಂಘ ಸುರತ್ಕಲ್, ಗೋವಿಂದದಾಸ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶ, 1982 ವಿಜ್ಞಾನ ತಂಡದ ದತ್ತಿನಿಧಿ, ಶಿಕ್ಷಕ ರಕ್ಷಕ ಸಂಘ, ಗೋವಿಂದ ದಾಸ ಕಾಲೇಜು ಅಲ್ಯುಮ್ನಿ ಅಸೋಸಿಯೇಶನ್, ಬಿ.ಎ.ಎಸ್.ಎಫ್ ಬಾಳ ಹಾಗೂ ನಂದಗೋಕುಲ ಥಿಯೇಟರ್ ಸ್ಕೂಲ್ ಸಹಕಾರದಲ್ಲಿ ಆಯೋಜಿಸಿದ್ದ ನೀನಾಸಂ ತಿರುಗಾಟ ನಾಟಕೋತ್ಸವದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೃಷ್ಣಮೂರ್ತಿ ಪಿ, ಆಡಳಿತಾತ್ಮಕ ನಿರ್ದೇಶಕ ಪ್ರೊ. ರಮೇಶ್ ಕುಳಾಯಿ, ಉಪಪ್ರಾಂಶುಪಾಲ ಪ್ರೊ.ರಮೇಶ್ ಭಟ್ ಎಸ್.ಜಿ, ಬಿ.ಎ.ಎಸ್.ಎಫ್ ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿ ಸಂತೋಷ್ ಪೈ, ವಿದ್ಯಾದಾಯಿನಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀಧರ್ ಎಚ್, ಗೋವಿಂದದಾಸ ಕಾಲೇಜು ಅಲ್ಯುಮ್ನಿ ಅಸೋಸಿಯೇಶನ್ ಅಧ್ಯಕ್ಷ ರಮೇಶ್ ರಾವ್ ಎಂ, ಅರೆಹೊಳೆ ಪ್ರತಿಷ್ಠಾನ ಹಾಗೂ ನಂದಗೋಕುಲ ಥಿಯೇಟರ್ ಸ್ಕೂಲ್ ಅರೆಹೊಳೆಯ ಸಂಯೋಜಕ ಅರೆಹೊಳೆ ಸದಾಶಿವ ರಾವ್, ನೀನಾಸಂ ನಾಟಕ ತಂಡದ ಸಂಯೋಜಕ ಮಂಜುನಾಥ ಉಪಸ್ಥಿತರಿದ್ದರು.

ವಿನೋದ್ ಕುಮಾರ್ ಕಾರ್ಯಕ್ರಮ ಸಂಯೋಜಿಸಿದರು. ಕಾರ್ಯಕ್ರಮದ ಬಳಿಕ ನೀನಾಸಂ ನಾಟಕ ತಂಡದಿಂದ ‘ಇಫಿಜೀನಿಯಾ’ ಮತ್ತು ‘ಮುಕ್ತಧಾರಾ’ ನಾಟಕಗಳು ಜರುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT