ಗುರುವಾರ , ಅಕ್ಟೋಬರ್ 6, 2022
23 °C

ಕೂಳೂರು ಸೇತುವೆಗೆ ಡಾಂಬರು ಹಾಕಿಸಿದ ಎಂಜಿನಿಯರ್‌ಗೆ ಶುಭಾಶಯವಿಲ್ಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು:  ‘ಕೂಳೂರು ಸೇತುವೆಗೆ ಡಾಂಬರು ಹಾಕಿಸಿದ ಎಂಜಿನಿಯರ್ ಒಬ್ಬರನ್ನು ಬಿಟ್ಟು ಉಳಿದ ಎಲ್ಲ ಎಂಜಿನಿಯರ್‌ಗಳಿಗೆ ಎಂಜಿನಿಯರ್ಸ್‌ ದಿನದ ಶುಭಾಶಯಗಳು’ ಎಂಬ ಸಂದೇಶವೊಂದು ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಮೂಲಕ ಎಲ್ಲರ ಗಮನ ಸೆಳೆಯಿತು.

ಪ್ರಧಾನಿ ನರೇಂದ್ರ ಮೋದಿ ಅವರ ಮಂಗಳೂರು ಭೇಟಿ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೂಳೂರು ಸೇತುವೆ ಮೇಲಿನ ಗುಂಡಿಗಳ ಮುಚ್ಚಲು ಹಾಕಿದ್ದ ಡಾಂಬರು ಹತ್ತೇ ದಿನಗಳಲ್ಲಿ
ಕಿತ್ತುಹೋಗಿತ್ತು. ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿ, ಮತ್ತೆ ದುರಸ್ತಿ ಕಾರ್ಯ ನಡೆದಿದೆ. ಸಾರ್ವಜನಿಕರೊಬ್ಬರು ಅದನ್ನು ಉಲ್ಲೇಖಿಸಿ ಎಂಜಿನಿಯರ್ಸ್‌ ದಿನದ ಶುಭಾಶಯಗಳನ್ನು ಈ ರೀತಿ ವಿಭಿನ್ನವಾಗಿ ಕೋರಿದ್ದಾರೆ.

ಕೆಲ ವರ್ಷಗಳ ಹಿಂದೆ ಪಂಪ್‌ವೆಲ್‌ ಮೇಲ್ಸೇತುವೆಯ ಕಾಮಗಾರಿಯ ಎಂಜಿನಿಯರ್‌ ಅನ್ನು ಉಲ್ಲೇಖಿಸಿ ಇದೇ ರೀತಿ ಶುಭಾಶಯ ಕೋರಲಾಗಿತ್ತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು