ಮಂಗಳೂರು: ಮುಂಬೈ ಸಿಸಿಬಿ ಪೊಲೀಸರ ಸೋಗಿನಲ್ಲಿ ಕರೆಮಾಡಿ, ‘ಡಿಜಿಟಲ್ ಅರೆಸ್ಟ್’ ಮಾಡಲಾಗಿದೆ ಎಂದು ಭೀತಿ ಹುಟ್ಟಿಸಿ, ಆನ್ಲೈನ್ ಮೂಲಕ ₹ 41.85 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ ಬಗ್ಗೆ ಸಂತ್ರಸ್ತ ವ್ಯಕ್ತಿ ದೂರು ನೀಡಿದ್ದು ನಗರದ ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘2026ರ ಜ.31ರಂದು ಅಪರಿಚಿತ ವ್ಯಕ್ತಿ ನನಗೆ ಕರೆ ಮಾಡಿ ತನ್ನನ್ನು ಮುಂಬೈ ಸಿಸಿಬಿ ಪೊಲೀಸ್ ಎಂದು ಪರಿಚಯಿಸಿಕೊಂಡ. ನನ್ನ ಗುರುತಿನ ಕಾರ್ಡ್ ನಂಬರ್ ಉಪಯೋಗಿಸಿ ಮುಂಬೈನಲ್ಲಿ ಬ್ಯಾಂಕೊಂದರ ಶಾಖೆಯಲ್ಲಿ ಖಾತೆ ತೆರೆದು ದೊಡ್ಡ ಮಟ್ಟದ ಅವ್ಯವಹಾರ ನಡೆಸಲಾಗಿದೆ. ಅದೇ ಗುರುತಿನ ಕಾರ್ಡ್ ನಂಬರ್ ಬಳಸಿ ಮೊಬೈಲ್ ಸಿಮ್ ಖರೀದಿಸಿ ವಂಚಿಸಲಾಗಿದೆ. ಅಕ್ರಮ ಹಣ ವರ್ಗಾವಣೆ ಸಂಬಂಧ ನನ್ನನ್ನು ಬಂಧಿಸುವುದಾಗಿ ತಿಳಿಸಿದ್ದ. ನನ್ನ ಬಂಧನಕ್ಕೆ ಸುಪ್ರಿಂ ಕೋರ್ಟ್ನಿಂದ ವಾರೆಂಟ್ ಆಗಿದೆ. ನನ್ನನ್ನು ಡಿಜಿಟಲ್ ಅರೆಸ್ಟ್ ಮಾಡಲಾಗಿದೆ ಎಂಬುದಾಗಿ ತಿಳಿಸಿದ್ದ’ ಎಂದು ಸಂತ್ರಸ್ತ ವ್ಯಕ್ತಿ ದೂರಿನಲ್ಲಿ ವಿವರಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು.

‘ವಾಟ್ಸ್ ಆ್ಯಪ್ ಮೂಲಕ ವಿಡಿಯೊ ಕರೆ ಮಾಡಿದ್ದ ಅವರು, ‘ತನಿಖೆಗೆ ಸಹಕರಿಸದಿದ್ದರೆ ಕೂಡಲೇ ಬಂಧಿಸುತ್ತೇವೆ. ಈ ವಿಚಾರವನ್ನು ಮಗ ಹಾಗೂ ಹಾಗೂ ಹೆಂಡತಿಗೂ ತಿಳಿಸಬಾರದು’ ಎಂದು ಹೆದರಿಸಿದ್ದರು. ನನ್ನ ಎಲ್ಲಾ ವೈಯಕ್ತಿಕ ವಿವರ ಮತ್ತು ಬ್ಯಾಂಕ್ ಖಾತೆಗಳ ವಿವರ ಪಡೆದುಕೊಂಡಿದ್ದರು. ಬಂಧನದಿಂದ ಪಾರಾಗಬೇಕಾದರೆ, ಪರಿಶೀಲನೆ ಮುಗಿಯುವವರೆಗೆ ನನ್ನ ಬ್ಯಾಂಕ್ ಖಾತೆಗಳಲ್ಲಿರುವ ಹಣವನ್ನು ಅವರು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುವಂತೆ ಸೂಚಿಸಿದ್ದರು. ತನಿಖೆ ಮುಗಿದ ಬಳಿಕ ಆ ಹಣವನ್ನು ಮರಳಿಸುವುದಾಗಿ ಭರವಸೆ ನೀಡಿದ್ದರು. ಈ ರೀತಿ ಫೆ.9ರಿಂದ 18ವರೆಗೆ ಒಟ್ಟು₹ 41.85 ಲಕ್ಷವನ್ನು ಆರ್ಟಿಜಿಎಸ್ ಮತ್ತು ನೆಫ್ಟ್ ಮೂಲಕ ತಮಗೆ ಬೇಕಾದ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂದು ಸಂತ್ರಸ್ತ ವ್ಯಕ್ತಿ ತಿಳಿಡಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.