ಮಂಗಳೂರು: ದಕ್ಷಿಣ ವಿಧಾನ ಸಭಾ ಕ್ಷೇತ್ರದ ವಿವಿಧ ಭಾಗಗಳಲ್ಲಿ ಮಳೆಹಾನಿಯಿಂದ ತೊಂದರೆಗೀಡಾದ ಪ್ರದೇಶಗಳಲ್ಲಿ ಕಾಮಗಾರಿ ಕೈಗೊಳ್ಳಲು ರಾಜ್ಯ ಸರ್ಕಾರದಿಂದ ಸುಮಾರು ₹ 10 ಕೋಟಿ ಬಿಡುಗಡೆಗೊಂಡು ಸುಮಾರು 18 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.

ಕಾಮಗಾರಿ ನಡೆಯುವ ಪ್ರದೇಶಗಳಿಗೆ ಎಂಜಿನಿಯರ್ ಹಾಗೂ ಸ್ಥಳೀಯ ಮುಖಂಡರೊಂದಿಗೆ ಭೇಟಿ ನೀಡಿದ ಅವರು, ಈ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಕಾಮಗಾರಿ ಪ್ರಾರಂಭಗೊಳ್ಳಲಿದೆ. ಮಳೆಗಾಲಕ್ಕಿಂತ ಮೊದಲೇ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಿಜೈ 31ನೇ ವಾರ್ಡ್ನ ಆನೆಗುಂಡಿ ಆಶ್ರಯ ಆಶ್ರಮದ ಬಳಿ ಹಾಗೂ ನಂದಗೋಕುಲ ಅಪಾರ್ಟ್ಮೆಂಟ್ ಬಳಿ ರಾಜಕಾಲುವೆ ನಿರ್ಮಾಣ ಕಾಮಗಾರಿಗೆ ₹30 ಲಕ್ಷ, ಕೊಡಿಯಾಲ್ಬೈಲ್ ವಾರ್ಡ್ನ ಹಿಂಭಾಗದ ಸ್ಟೆಲ್ಲಾಡೋರ್ ವೇಗಸ್ ಮನೆ ಬಳಿ, ಬಳ್ಳಾಲ್ ಬಾಗ್ ಶರಾವತಿ ಅಪಾರ್ಟ್ಮೆಂಟ್ ಬಳಿ ರಾಜ ಕಾಲುವೆ ಬದಿಯ ತಡೆಗೋಡೆ ನಿರ್ಮಾಣ ಕಾಮಗಾರಿ ಸುಮಾರು ₹ 30 ಲಕ್ಷ, ವಾರ್ಡ್ 32ರ ಕದ್ರಿ ಉತ್ತರ ಸರ್ಕಿಟ್ ಹೌಸ್ನ ಬಳಿ ತಡೆಗೋಡೆ ನಿರ್ಮಾಣ ಕಾಮಗಾರಿಗೆ ₹1.90 ಕೋಟಿ, 40ನೇ ವಾರ್ಡ್ ಮಂಗಳೂರು ಕೋರ್ಟ್ ವಾರ್ಡ್ನ ಸಿಟಿ ಆಸ್ಪತ್ರೆ ಮುಂಭಾಗ ರಾಜಕಾಲುವೆ ನಿರ್ಮಾಣ ಕಾಮಗಾರಿಗೆ ₹ 30 ಲಕ್ಷ, ವಾರ್ಡ್ ಸಂಖ್ಯೆ 38ರ ಬೆಂದೂರ್ವೆಲ್ನ ಗೀತಾಂಜಲಿ ಮುಂಭಾಗ ತಡೆಗೋಡೆ ಅಭಿವೃದ್ಧಿ ಕಾಮಗಾರಿಗೆ ₹ 30 ಲಕ್ಷ ಮಂಜೂರಾಗಿದೆ.

ತೋಡುಗಳ ಹೂಳೆತ್ತುವ ಕೆಲಸವನ್ನು ಕೂಡಲೇ ಕೈಗೊಳ್ಳುವಂತೆ ಸೂಚಿಸಿದರು. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಹೂಳೆತ್ತುವ ಕಾಮಗಾರಿಗೆ ಸುಮಾರು 4 3.50 ಕೋಟಿ ರಾಜ್ಯ ಸರ್ಕಾರದಿಂದ ಮಂಜೂರಾಗಿದ್ದು, ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಸೂಚಿಸಿದರು.

ಮಳೆನೀರು ನೀರು ಹರಿಯುವ ತೋಡುಗಳಲ್ಲಿ ಒಳಚರಂಡಿ ನೀರು ಹರಿಯುವುದನ್ನು ತಡೆಗಟ್ಟಲು ಯೋಜನೆ ರೂಪಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗಿದ್ದು, ₹ 1,250 ಕೋಟಿಯ ಯೋಜನೆ ಜಾರಿಗೆ ತರಲಾಗುವುದು. ಈ ಯೋಜನೆಯನ್ನು ಜಾರಿಗೆ ತರಲು ವಿಧಾನ ಪರಿಷತ್ನಲ್ಲಿ ಸರ್ಕಾರದ ಗಮನ ಸೆಳೆಯಲಾಗಿದೆ. ಈ ಸಂಬಂಧ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಐವನ್ ಡಿಸೋಜ ತಿಳಿಸಿದರು.

ಪಾಲಿಕೆ ಎಂಜಿನಿಯರ್ಗಳಾದ ನಿತ್ಯಾನಂದ, ಮಂಜುನಾಥ್ ಚಿನ್ಮಯಿ, ಸೈದಾ, ಪ್ರಮುಖರಾದ ಶಶಿಧರ್ ಹೆಗ್ಡೆ, ನವೀನ್ ಡಿಸೋಜ, ಲ್ಯಾನ್ಸ್ಲಾಟ್ ಪಿಂಟೊ, ಡಿ.ಕೆ.ಅಶೋಕ್, ಪ್ರಕಾಶ್ ಸಾಲಿಯಾನ್, ವಿನಯ್ ರಾಜ್, ಪ್ರೇಮ್ ಬಲ್ಲಾಳ್ಬಾಗ್, ವರುಣ್ ದೇವಾಡಿಗ, ಓಸ್ವಾಲ್ಡ್ ಬೆಂದೂರುವೆಲ್, ರಾಜೇಶ್ ಬೆಂಗ್ರೆ, ಆಲಿಸ್ಟನ್ ಡಿಕುನ್ಹ, ಜಯ ಪೂಜಾರಿ, ಜಗದೀಶ್ ಕುಲಾಲ್, ವಸಂತ್ ಬಿಜೈ, ಗೌತಮ್ ಕಾಪಿಕಾಡ್, ಸುಧೀರ್ ಬಿಜೈ, ಸಂತೋಷ್ ಬಿಜೈ, ಕ್ಲೈಡ್ ಡಿಸೋಜ ಜೊತೆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.