ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸವಿಲ್ಲದ ಕಾರ್ಮಿಕರಿಗೆ ‘ಮೇ’ ದಿನ

Last Updated 1 ಮೇ 2020, 2:35 IST
ಅಕ್ಷರ ಗಾತ್ರ

ಮಂಗಳೂರು: ಕಾರ್ಮಿಕರ ಹೋರಾಟದ ನೆನಪಿಗಾಗಿ ಆಚರಿಸುವ ಮೇ ದಿನ ಮತ್ತೊಮ್ಮೆ ಬಂದಿದೆ. ಆದರೆ, ಈ ವರ್ಷ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಮಿಕರು ಬದುಕು ಮಾತ್ರ ಅತಂತ್ರದಲ್ಲಿದೆ.

ನಗರದ ಬೈಕಂಪಾಡಿ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಕಿರು, ಸಣ್ಣ, ಮಧ್ಯಮ ಹಾಗೂ ಬೃಹತ್‌ ಕೈಗಾರಿಕೆಗಳು ಬಂದ್‌ ಆಗಿವೆ. ಮೀನುಗಾರಿಕೆ, ಬೀಡಿ ಉದ್ಯಮ, ಖಾಸಗಿ ಬಸ್‌ಗಳ ಓಡಾಟವೂ ಸ್ಥಗಿತಗೊಂಡಿವೆ. ಉದ್ಯೋಗಿಗಳ ಪೈಕಿ ಬಹುತೇಕ ಮಂದಿ ಕರಾ
ವಳಿ ಭಾಗದವರೇ ಆಗಿದ್ದು, ಉಳಿದವರು ಹೊರಜಿಲ್ಲೆ- ಹೊರರಾಜ್ಯದವರಾಗಿದ್ದಾರೆ.

ಬಹುತೇಕ ಕಾರ್ಮಿಕರು ಮನೆಗೆ ಹೋಗಿದ್ದರೆ, ಕೈಗಾರಿಕೆಗಳಲ್ಲಿ ದುಡಿಯುವ ಸಾವಿರಾರು ಕಾರ್ಮಿಕರು ಅತ್ತ ಕೆಲಸವೂ ಇಲ್ಲ; ಇತ್ತ ದೈನಂದಿನ ಬದುಕು ನಡೆಸುವುದೂ ದುಸ್ತರವಾಗಿ ಪರಿಣಮಿಸಿದೆ. ಮೊದಲೇ ಆರ್ಥಿಕ ಹೊಡೆತದಿಂದ ನೂರಾರು ಸಮಸ್ಯೆ ಎದುರಿಸುತ್ತಿದ್ದ ಕರಾವಳಿಯ ಕೈಗಾರಿಕೆಗಳ ಮಾಲೀಕರಿಗೂ ಲಾಕ್‌ಡೌನ್‌ನಿಂದಾಗಿ ಸಾವಿರಾರು ಕೋಟಿ ರೂಪಾಯಿ ನಷ್ಟವಾಗುತ್ತಿದೆ.

ಕೈಗಾರಿಕಾ ಇಲಾಖೆಯ ಮಾಹಿತಿ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಹಾರ, ಕೃಷಿ ಆಧಾರಿತ 2,507 ಕೈಗಾರಿಕೆಗಳಿದ್ದು, 24,452 ಉದ್ಯೋಗಿಗಳು ತೊಡಗಿಸಿಕೊಂಡಿದ್ದರು. ಆದರೆ ಸದ್ಯ ಕೋವಿಡ್‌ 19 ಇದ್ದರೂ ಅವಶ್ಯಕ ವಸ್ತುಗಳ ಪೈಕಿ ಆಹಾರ ಉತ್ಪನ್ನಗಳಿಗೆ ಅವಕಾಶವಿರುವ ಹಿನ್ನೆಲೆಯಲ್ಲಿ ಇದರಲ್ಲಿ ಕೆಲವು ಕೈಗಾರಿಕೆಗಳು ಕಾರ್ಯಾಚರಿಸುತ್ತಿವೆ.

ಉಳಿದಂತೆ ಜಿಲ್ಲೆಯಲ್ಲಿ ರೆಡಿಮೆಡ್‌ ಗಾರ್ಮೆಂಟ್ಸ್‌, ಟೆಕ್ಸ್‌ಟೈಲ್ಸ್‌ನ 3,179 ಘಟಕಗಳು ಇದ್ದು 15,828 ಉದ್ಯೋಗಿಗಳು, ಮರ ಆಧಾರಿತ ಪೀಠೊಪಕರಣದ 2,818 ಘಟಕಗಳಲ್ಲಿ 13,074 ಕಾರ್ಮಿಕರು, ಕಾಗದ, ಅದರ ಉತ್ಪನ್ನಗಳ 874 ಘಟಕಗಳಲ್ಲಿ 2,974 ಉದ್ಯೋಗಿಗಳು, ಚರ್ಮ ಆಧಾರಿತ 464 ಘಟಕಗಳಲ್ಲಿ 893 ಉದ್ಯೋಗಿಗಳು, ಪ್ಲಾಸ್ಟಿಕ್‌, ಕೆಮಿಕಲ್‌ ಆಧಾರಿತ 936 ಘಟಕಗಳಲ್ಲಿ 4,772 ಉದ್ಯೋಗಿಗಳು, ಖನಿಜ ಆಧಾರಿತ 240 ಘಟಕಗಳಲ್ಲಿ 3,083 ಉದ್ಯೋಗಿಗಳು, ಲೋಹ ಆಧಾರಿತ (ಸ್ಟೀಲ್‌) 1,865 ಘಟಕಗಳಲ್ಲಿ 10,003 ಉದ್ಯೋಗಿಗಳು, ತಾಂತ್ರಿಕ ಕಾರ್ಯದ 555 ಘಟಕಗಳಲ್ಲಿ 4,805 ಉದ್ಯೋಗಿಗಳು, ಎಲೆಕ್ಟ್ರಿಕಲ್‌ ಮಷಿನರಿ ಹಾಗೂ ಟ್ರಾನ್ಸ್‌ಪೋರ್ಸ್‌ನ 920 ಘಟಕಗಳ 1,573 ಉದ್ಯೋಗಿಗಳು, ರಿಪೇರಿ ಹಾಗೂ ಸರ್ವಿಸಿಂಗ್‌ನ 3,525 ಘಟಕಗಳಲ್ಲಿ 16,672 ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇವರೆಲ್ಲ ಈಗ ಕೆಲಸವಿಲ್ಲದೆ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ.

ಬೀಡಿ ಕಾರ್ಮಿಕರ ಕಡೆಗಣನೆ’

ಅಸಂಘಟಿತ ಕ್ಷೇತ್ರದಲ್ಲಿ ದುಡಿಯುತ್ತಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಉಭಯ ಜಿಲ್ಲೆಗಳ ಸುಮಾರು 2 ಲಕ್ಷಕ್ಕಿಂತಲೂ ಅಧಿಕ ಬೀಡಿ ಕಾರ್ಮಿಕರು ಕಷ್ಟದಿಂದ ಜೀವನ ಸಾಗಿಸುತ್ತಿದ್ದಾರೆ. ರಾಜ್ಯ ಸರ್ಕಾರ ಅಸಂಘಟಿತ ವಲಯದ ಕೆಲ ಕಾರ್ಮಿಕರಿಗೆ ಪರಿಹಾರ ಘೋಷಿಸಿದ್ದರೂ, ಬೀಡಿ ಕಾರ್ಮಿಕರನ್ನು ಕಡೆಗಣಿಸಿರುವುದು ದುರಂತ ಎಂದು ಎಸ್.ಕೆ ಬೀಡಿ ವರ್ಕರ್ಸ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ವಿ. ಸೀತಾರಾಂ ಬೇರಿಂಜ ಹೇಳಿದ್ದಾರೆ.

ಲಾಕ್ ಡೌನ್ ಮುಗಿಯುವ ತನಕ ಕಾರ್ಮಿಕರಿಗೆ ಕೆಲಸ ನೀಡುವ ಬದಲು ತಾತ್ಕಾಲಿಕ ಪರಿಹಾರ ನೀಡಬೇಕು. ಕೇರಳ ಸರ್ಕಾರ ಸುಮಾರು ₹2 ಕೋಟಿ ಪ್ಯಾಕೇಜ್ ಮೀಸಲಿಟ್ಟು, ಈಗಾಗಲೇ ಕ್ಷೇಮ ನಿಧಿ ಮಂಡಳಿಯಿಂದ ಪ್ರತಿ ಬೀಡಿ ಕಾರ್ಮಿಕರ ಬ್ಯಾಂಕ್ ಖಾತೆಗೆ ₹3ಸಾವಿರ ಪಾವತಿಸಿದೆ. ಇದೇ ಮಾದರಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಕೂಡಾ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT