ಗ್ರಾಹಕರ ಬಯಸಿದ್ದಕ್ಕಿಂತ ಹೆಚ್ಚಿನ ಸೇವೆ ಯಶಸ್ಸಿನ ಗುಟ್ಟು

ಮಂಗಳೂರು:‘ಬ್ಯಾಂಕ್ ಏಳಿಗೆ ಕಾಣಲು ಉತ್ತಮ ಆಡಳಿತ, ಸಮರ್ಪಣಾ ಮನೋಭಾವದ ಸಿಬ್ಬಂದಿ ಮತ್ತು ಉತ್ತರ ಗ್ರಾಹಕರು ಇರಬೇಕು’ ಎಂದು ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನ ಅಭಿಪ್ರಾಯಪಟ್ಟರು.
ನಗರದ ಎಂಸಿಸಿ ಬ್ಯಾಂಕಿನ ಶತಮಾನೋತ್ತರ ದಶಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಎಂಸಿಸಿ ಸಂಸ್ಥಾಪಕ ಪಿ.ಎಫ್. ಎಕ್ಸ್. ಸಲ್ಡಾನ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಭಾನುವಾರ ಮಾತನಾಡಿದರು.
‘ಎಂಸಿಸಿ ಬ್ಯಾಂಕ್ ನೂರ ಹತ್ತು ಸಂವತ್ಸರಗಳನ್ನು ಸಂಪೂರ್ಣಗೊಳಿಸಿ, ಸದೃಢವಾಗಿ ಬೆಳೆದು ನಿಂತಿರುವುದು ಹೆಮ್ಮೆಯ ವಿಚಾರ. ಗ್ರಾಹಕರು ಬಯಸಿದ್ದಕ್ಕಿಂತಲೂ ಹೆಚ್ಚು ಸೇವೆ ಒದಗಿಸುವ ಮನೋಧರ್ಮ ಈ ಅಭಿವೃದ್ಧಿಗೆ ಮೂಲ ಕಾರಣ. ಬ್ಯಾಂಕ್ ತನ್ನ ಲಾಭಾಂಶದಲ್ಲಿ ಅಶಕ್ತ ಕುಟುಂಬಗಳಿಗೆ ದೇಣಿಗೆ ನೀಡುವ ಮೂಲಕ ಇತರರಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದೆ’ ಎಂದು ಮೆಚ್ಚುಗೆ ಸೂಚಿಸಿದರು.
‘ಸಂಸ್ಥೆಯ ಇನ್ನಷ್ಟು ಯಶಸ್ಸು ಸಾಧಿಸಲಿ. ದೇಶ ವಿದೇಶಗಳಲ್ಲಿ ಎಂಸಿಸಿ ಬ್ಯಾಂಕ್ ಹೆಸರು ಮೂಡಿಬರುವಂತಾಗಲಿ’ ಎಂದು ಅವರು ಶುಭ ಹಾರೈಸಿದರು.
ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ದಿಕ್ಸೂಚಿ ಭಾಷಣ ಮಾಡಿದರು.
ಉಡುಪಿ ಧರ್ಮ ಪ್ರಾಂತ್ಯದ ಬಿಷಪ್ ಡಾ. ಜೆರಾಲ್ಡ್ ಐಸಾಕ್ ಲೋಬೊ, ಆರ್ಸುಲಾಯ್ನ್ ಮದರ್ ಜನರಲ್ ಸಿಸ್ಟರ್ ಮಿಲ್ಲಿ ಫರ್ನಾಂಡಿಸ್, ಬ್ಯಾಂಕಿನ ಮಾಜಿ ಅಧ್ಯಕ್ಷ ವೆಲೆಂಟೈನ್ ಡಿಸಿಲ್ವ, ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವ, ಪ್ರಧಾನ ವ್ಯವಸ್ಥಾಪಕ ಸುನಿಲ್ ಮಿನೇಜಸ್, ನಿರ್ದೇಶಕರಾದ ಆ್ಯಂಡ್ರ್ಯೂ ಡಿಸೋಜ, ಮಾರ್ಸೆಲ್ ಎಂ ಡಿಸೋಜ, ಜೋಸೆಫ್ ಅನಿಲ್ ಪತ್ರಾವೊ, ಹೆರಾಲ್ಡ್ ಮೊಂತೆರೊ, ಎಲ್ರೋಯ್ ಕೆ ಕ್ರಾಸ್ಟೊ, ಜೆ.ಪಿ ರಾಡ್ರಿಗಸ್, ಡೇವಿಡ್ ಡಿಸೋಜ, ರೋಶನ್ ಡಿಸೋಜ, ಡಾ.ಜೆರಾಲ್ಡ್ ಪಿಂಟೊ, ಐರಿನ್ ರೆಬೆಲ್ಲೊ, ಡಾ. ಫ್ರೀಡಾ ಡಿಸೋಜ, ಸಿ.ಜಿ ಪಿಂಟೊ, ಸುಶಾಂತ್ ಸಲ್ಡಾನ್ಹಾ, ಫೆಲಿಕ್ಸ್ ಡಿಕ್ರೂಜ್, ಆಲ್ವಿನ್ ಪಿ ಮೊಂತೇರೊ, ಶರ್ಮಿಳಾ ಮಿನೇಜಸ್ ಮತ್ತಿತರರು ಇದ್ದರು..
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.