ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೂಡುಬಿದಿರೆ: ವಿಸಿಟಿಂಗ್ ಕಾರ್ಡ್ ತೋರಿಸಿ ಚಿನ್ನದ ಸರ ಅಪಹರಣ 

Published : 18 ಆಗಸ್ಟ್ 2024, 15:25 IST
Last Updated : 18 ಆಗಸ್ಟ್ 2024, 15:25 IST
ಫಾಲೋ ಮಾಡಿ
Comments

ಮೂಡುಬಿದಿರೆ: ಮಾರ್ಪಾಡಿ ಗ್ರಾಮದ ವಿವೇಕಾನಂದ ನಗರದಲ್ಲಿ ವಿಳಾಸ ಕೇಳುವ ನೆಪದಲ್ಲಿ ಭಾನುವಾರ ಮಹಿಳೆಯೊಬ್ಬರ ಚಿನ್ನದ ಸರ ಕಸಿಯಲಾಗಿದೆ.

ನಿರ್ಮಲಾ ಪಂಡಿತ್ ಅವರು ವಿವೇಕಾನಂದ ನಗರದಲ್ಲಿರುವ ಮಗಳ ಮನೆಯ ತೋಟದಲ್ಲಿದ್ದಾಗ ಮನೆಯ ಗೇಟ್‌ ಮುಂಭಾಗ ಇಬ್ಬರಿದ್ದ ಸ್ಕೂಟರ್ ನಿಂತಿತು. ಈ ಪೈಕಿ ಒಬ್ಬ ಮಹಿಳೆಯ ಬಳಿ ಬಂದು ಆರ್.ಕೆ.ಟ್ರೇಡರ್ಸ್ ಎಲ್ಲಿ ಎಂದು ಕೇಳಿದಾಗ ಮಹಿಳೆ ನನಗೆ ಗೊತ್ತಿಲ್ಲ ಎಂದು ಉತ್ತರಿಸಿದ್ದಾರೆ. ನಂತರ ಆ ವ್ಯಕ್ತಿ ವಿಸಿಟಿಂಗ್ ಕಾರ್ಡ್‌ ತೋರಿಸಿ ಈ ವಿಳಾಸ ಎಲ್ಲಿ ಎಂದು ಮರು ಪ್ರಶಿಸಿದ. ನಿರ್ಮಲಾ ಅವರು ವಿಸಿಟಿಂಗ್ ಕಾರ್ಡ್‌ ನೋಡುತ್ತಿದ್ದಂತೆ ವ್ಯಕ್ತಿ ಚಿನ್ನದ ಸರ ಮತ್ತು ಮಾಂಗಲ್ಯ ಸೂತ್ರವನ್ನು ಎಳೆದಿದ್ದಾನೆ. ಈ ವೇಳೆ ಚಿನ್ನದ ಸರ ಕಳ್ಳನ ಕೈಗೆ ಬಂದರೆ ಮಾಂಗಲ್ಯ ಸೂತ್ರ ಅರ್ಧ ಮಾತ್ರ ಸಿಕ್ಕಿದ್ದು, ಉಳಿದ ಭಾಗ ಕತ್ತಿನಲ್ಲೆ ಉಳಿದಿದೆ. ಈ ವೇಳೆ ನಿರ್ಮಲಾ ಅವರು ಕೂಗಿಕೊಂಡಾಗ ಮನೆಯವರು ಹೊರ ಬಂದಿದ್ದು ಸರ ಕಸಿದ ವ್ಯಕ್ತಿ ಸ್ಕೂಟರ್ ಏರಿ ಪರಾರಿಯಾಗಿದ್ದಾನೆ. ಆರೋಪಿಗಳ ಮುಖ ಚಹರೆಯನ್ನು ಗುರುತು ಹಚ್ಚಿದ್ದಾರೆ. ಕಳವಾದ ಚಿನ್ನದ ಮೌಲ್ಯ ಸುಮಾರು ಒಂದೂವರೆ ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT