ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉಜಿರೆ | ಹಸ್ತಪ್ರತಿಗಳ ಸಂಶೋಧನೆ: ಒಡಂಬಡಿಕೆ ಪತ್ರ ಹಸ್ತಾಂತರ

Published 30 ಜನವರಿ 2024, 14:27 IST
Last Updated 30 ಜನವರಿ 2024, 14:27 IST
ಅಕ್ಷರ ಗಾತ್ರ

ಉಜಿರೆ: ಹಾಸನದ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಹೈದರಾಬಾದ್‌ನ ಕೇಂದ್ರ ಸರ್ಕಾರದ ರಾಷ್ಟ್ರೀಯ ಭಾರತೀಯ ಆಯುರ್‌ವಿಜ್ಞಾನ ಸಂಪದ ಸಂಸ್ಥಾನದ ಮಧ್ಯೆ ಹಸ್ತಪ್ರತಿಗಳ ಸಂಶೋಧನೆ ಕುರಿತು ಒಡಂಬಡಿಕೆ ಪತ್ರಕ್ಕೆ ಮಂಗಳವಾರ ಧರ್ಮಸ್ಥಳದಲ್ಲಿ ಸಹಿ ಮಾಡಲಾಯಿತು.

ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷ, ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ಆಯುರ್ವಿಜ್ಞಾನ ಸಂಪದ ಸಂಸ್ಥಾನದ ಹೈದರಾಬಾದ್‌ನ ಸಹಾಯಕ ನಿರ್ದೇಶಕ ಡಾ.ಗೋಲಿ ಪೆಂಚಲ ಪ್ರಸಾದ, ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಪ್ರಾಂಶುಪಾಲ ಡಾ.ಪ್ರಸನ್ನ ಎನ್.ರಾವ್, ಉಪಪ್ರಾಂಶುಪಾಲೆ ಡಾ.ಶೈಲಜಾ ಯು., ಸಂಹಿತಾ ಸಿದ್ಧಾಂತ ವಿಭಾಗದ ಮುಖ್ಯಸ್ ಡಾ.ಶ್ರೀನಾಥ ವೈದ್ಯ, ಪಂಚಕರ್ಮ ವಿಭಾಗದ ಮುಖ್ಯಸ್ಥ ಡಾ.ಅಶ್ವಿನಿಕುಮಾರ್ ಎಂ. ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT