ಶನಿವಾರ, ಏಪ್ರಿಲ್ 1, 2023
32 °C

ಹಸಿರು ವಲಯ ನಿರ್ಮಿಸದ ಎಂಆರ್‌ಪಿಎಲ್: ಮನೆ ಮನೆ ಪ್ರತಿಭಟನೆಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಪರಿಸರದ ಮೇಲಿನ‌ ಹಾನಿ ತಗ್ಗಿಸಲು ಹಸಿರು ವಲಯ ನಿರ್ಮಿಸಬೇಕು  ಎಂಬ ಸರ್ಕಾರದ ಆದೇಶ ಪಾಲಿಸದ ಎಂಆರ್ ಪಿಎಲ್: ವಿರುದ್ಧ ಸ್ಥಳೀಯರು ಮನೆಮನೆ ಪ್ರತಿಭಟನೆ ಆರಂಭಿಸಿದ್ದಾರೆ.

ಕಂಪನಿಯ ಕೈಗಾರಿಕೆಗಳಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯದಿಂದ ಜೋಕಟ್ಟೆ, ಕಳವಾರು, ಕೆಂಜಾರು, ತೋಕೂರು ಗ್ರಾಮಗಳು ರೋಗಗ್ರಸ್ತಗೊಂಡಿವೆ.  ಈ ಬಗ್ಗೆ ಮನವಿ ಸಲ್ಲಿಸಿದರೂ ಎಂಆರ್ ಪಿಎಲ್ ಯಾವುದೇ ಪರಿಹಾರ ಕ್ರಮಗಳನ್ನು ಕೈಗೊಂಡಿಲ್ಲ. ಸರ್ಕಾರ ಈ ಕಂಪೆನಿಯ ವಿರುದ್ಧ ಕ್ರಮ ಜೈಗೊಳ್ಳಬೇಕು ಎಂದು ಆಗ್ರಹಿಸಿ ಜೋಕಟ್ಟೆಯ ನಾಗರಿಕ ಹೋರಾಟ ಸಮಿತಿ 'ಮನೆ ಮನೆ ಪ್ರತಿಭಟನೆ ಹಮ್ಮಿಕೊಂಡಿದೆ. 

ಈ ಕಂಪನಿಯ ಕಾರಣದಿಂದಾಗಿ ಸ್ಥಳೀಯರು ಹಲವಾರು ಸಮಸ್ಯೆ ಎದುರಿಸುತ್ತಿದ್ದಾರೆ. ಸ್ಥಳೀಯರಿಗೆ ಇಷ್ಟೆಲ್ಲ ಅನನುಕೂಲವಾಗಿದ್ದರೂ, ಎಂಆರ್ ಪಿಎಲ್ ಕಂಪನಿಯು ತನ್ನಲ್ಲಿರುವ  ಉದ್ಯೋಗವನ್ನೂ  ಸ್ಥಳೀಯರಿಗೆ ನೀಡುತ್ತಿಲ್ಲ‌ ಎಂದು ಸಮಿತಿ ದೂರಿದೆ‌.
ಡಿವೈಎಫ್ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ ಅವರು ಜೋಕಟ್ಟೆ ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆಗೆ ಭಾನುವಾರ ಚಾಲನೆ ನೀಡಿದರು.

 62ನೇ ತೋಕೂರು ಗ್ರಾಮ ಪಂಚಾಯತಿ ಅಧ್ಯಕ್ಷ ಫಾರೂಕ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬಿ.ಎಸ್.ಬಶೀರ್,  ಗ್ರಾ.ಪಂ ಸದಸ್ಯ ಅಬೂಬಕ್ಕರ್ ಬಾವ, ಹೋರಾಟ ಸಮಿತಿಯ ಮುಖಂಡರಾದ ಚಂದ್ರಶೇಖರ್,  ಐತಪ್ಪ ಜೋಕಟ್ಟೆ, ಮನೋಜ್ ನಿರ್ಮುಂಜೆ, ಶೇಖರ್ ನಿರ್ಮುಂಜೆ, ಶ್ರೀನಿವಾಸ್ ಕೆಂಜಾರು, ಲಾನ್ಸಿ ಕಳವಾರು, ಇಕ್ಬಾಲ್ ಜೋಕಟ್ಟೆ ಮತ್ತಿತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು