ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೂಲ್ಕಿ: ಬೈಕ್ ಕದ್ದವರ ಬಂಧನ

Published 14 ಜೂನ್ 2024, 12:41 IST
Last Updated 14 ಜೂನ್ 2024, 12:41 IST
ಅಕ್ಷರ ಗಾತ್ರ

ಮೂಲ್ಕಿ: ಇಲ್ಲಿನ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯಮಹಾ ಆರ್-15 ಬೈಕ್‌ ಕಳವು ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಕಳವು ಮಾಡಿದ ಬೈಕ್ ವಶಪಡಿಸಿಕೊಂಡಿದ್ದಾರೆ.

ವಿಜಯಪುರ ಜಿಲ್ಲೆ ಮುದ್ದೆಬಿಹಾಳ ತಾಲ್ಲೂಕಿನ ನಾಲತ್ತವಾಡ ಅಂಬೇಡ್ಕರ್ ನಗರದ ಮೌನೇಶ್ ಭಜಂತ್ರಿ (23), ಮಹಮ್ಮದ್ ಸಮೀರ್ ಕಸಬಾ (20) ಮತ್ತು ವೀರಭದ್ರಪ್ಪ (24) ಆರೋಪಿಗಳು.

ಬಪ್ಪನಾಡು ದೇವಸ್ಥಾನದ ದ್ವಾರದ ಬಳಿ ಮೇ 24ರಂದು ನಿತೇಶ್ ಭಂಡಾರಿ ನಿಲ್ಲಿಸಿದ್ದ ಬೈಕ್ ಕಳವಾಗಿರುವ ಕುರಿತು ಮೂಲ್ಕಿ ದೂರು ದಾಖಲಾಗಿತ್ತು. ಪಿಎಸ್‌ಐ ವಿನಾಯಕ ಬಾವಿಕಟ್ಟಿ ಮತ್ತು ಸಿಬ್ಬಂದಿ ಇದೇ 14ರಂದು ಪುನರೂರು ಚೆಕ್ ಪೋಸ್ಟ್ ಬಳಿ ಆರೋಪಿಗಳನ್ನು ಬಂಧಿಸಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT