ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಾಜಿಲ್ ಹತ್ಯೆಗೆ ನೇರ ಹೊಣೆ ಸಿಎಂ ಬೊಮ್ಮಾಯಿ: ಮುನೀರ್ ಕಾಟಿಪಳ್ಳ

Last Updated 28 ಜುಲೈ 2022, 17:29 IST
ಅಕ್ಷರ ಗಾತ್ರ

ಮಂಗಳೂರು: ಮುಖ್ಯಮಂತ್ರಿ ಭೇಟಿಯ ಬೆನ್ನಲ್ಲೇ ಸುರತ್ಕಲ್‌ನಲ್ಲಿ ನಡೆದ ಫಾಜಿಲ್ ಹತ್ಯೆಗೆ ನೇರ ಹೊಣೆ ಮುಖ್ಯಮಂತ್ರಿ ಬೊಮ್ಮಾಯಿ. ಅವರು ಇಂದು ದಕ್ಷಿಣ ಕನ್ನಡ ಜಿಲ್ಲಾ ಭೇಟಿಯ ಸಂದರ್ಭ ತೋರಿದ ಸಾರ್ವಜನಿಕ‌ ಹೊಣೆಗೇಡಿತನವೇ ಕೊಲೆಗಡುಕರಿಗೆ ಧೈರ್ಯ ನೀಡಿದೆ‌ಎಂದುಡಿವೈಎಫ್ಐ ರಾಜ್ತ ಘಟಕದ ಅಧ್ಯಕ್ಷಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.

ಜಿಲ್ಲೆಯಲ್ಲಿ ನಡೆಯುತ್ತಿರುವ ಅಮಾಯಕರ ಸರಣಿ ಕೊಲೆಗಳಿಗೆ ಬೊಮ್ಮಾಯಿ ಸರ್ಕಾರವೇ ಕಾರಣ. ನಿರ್ಲಜ್ಜ ಕೋಮುವಾದಿ ಆಡಳಿತದ ಕರ್ನಾಟಕ ಮಾದರಿಯೊಂದನ್ನು ಬೊಮ್ಮಾಯಿ ನಿರ್ಮಿಸಿ ಬಿಟ್ಟರು. ಅವರಿಗೆ ಮುಖ್ಯಮಂತ್ರಿಯಾಗಿ ಮುಂದುವರಿಯಬಾರದು. ರಾಜಿನಾಮೆ ಕೊಟ್ಟು ನಿರ್ಗಮಿಸಲಿ ಎಂದು ಮುನೀರ್‌ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ ಮಂಗಲಪೇಟೆಯಲ್ಲಿ ನಡೆದ ಅಮಾನುಷ ಕೊಲೆಯನ್ನು ಖಂಡಿಸಿದ್ದಾರೆ. ಈ ಘಟನೆಯನ್ನು ಅತ್ಯುಗ್ರವಾಗಿ ಖಂಡಿಸುತ್ತೇನೆ. ದುಷ್ಕೃತ್ಯ ನಡೆಸಿದವರನ್ನು ಬಂಧಿಸಿ, ಕಾನೂನಿನ ಕ್ರಮ ಜರುಗಿಸಲು, ಪೊಲೀಸರು ಪೂರ್ಣ ಸ್ವಾತಂತ್ರ್ಯ ಹೊಂದಿದ್ದು, ಜನತೆ ಶಾಂತಿಯಿಂದ ಸಹಕರಿಸಬೇಕು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT