ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾರದೆಯ ಸನ್ನಿಧಿಯಲ್ಲಿ ಸಂತವಾಣಿ ಇಂಪು

Last Updated 4 ಅಕ್ಟೋಬರ್ 2022, 6:09 IST
ಅಕ್ಷರ ಗಾತ್ರ

ಮಂಗಳೂರು: ರಥಬೀದಿ ಸಾರ್ವಜನಿಕ ಶಾರದಾ ಮಹೋತ್ಸವ ಶತಮಾನೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಸರಸ್ವತಿ ಕಲಾಮಂಟಪದಲ್ಲಿ ಜರುಗಿತು.

ಮುಖ್ಯ ಅತಿಥಿಗಳಾಗಿ ಆರ್‌ಎಸ್‌ಎಸ್‌ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್, ಯುಪಿಸಿಎಲ್ ಕಾರ್ಯಕಾರಿ ಅಧ್ಯಕ್ಷ ಕಿಶೋರ್ ಆಳ್ವ ಭಾಗವಹಿಸಿದ್ದರು. ಸ್ಕೂಲ್ ಬುಕ್ ಕಂಪನಿಯ ಪಾಲುದಾರ ಪಿ.ಕೃಷ್ಣ ಭಂಡಾರಿ, ಲೆಕ್ಕ ಪರಿಶೋಧಕ ಎಸ್. ಶ್ರೀನಿವಾಸ ಕಾಮತ್, ಮಾಯಾ ಟ್ರೇಡರ್ಸ್‍ನ ಕೆ. ಅನಂತ ಕಾಮತ್, ಭದ್ರಾ ಗ್ಯಾಸ್ ಏಜೆನ್ಸೀಸ್‍ನ ಮಂಜುನಾಥ ಆಚಾರ್ಯ, ಉಪೇಂದ್ರ ಟ್ರೇಡಿಂಗ್‍ನ ವರದರಾಯ ಶೆಣೈ, ರಾಹುಲ್ ಟ್ರೇಡರ್ಸ್‍ನ ಬಿ. ಅನಂತ ಶೆಣೈ, ಕೆನರಾ ಗೂಡ್ಸ್ ಟ್ರಾನ್ಸ್‌ಪೋರ್ಟ್‍ನ ಮಾಧವರಾಯ ಪೈ, ಶತಮಾನೋತ್ಸವ ಸಮಿತಿಯ ಸದಸ್ಯ ಲೆಕ್ಕ ಪರಿಶೋಧಕ ದಾಮೋದರ ಶೆಣೈ ಉಪಸ್ಥಿತರಿದ್ದರು.

ಪ್ರತಿನಿತ್ಯ ಜಿಎಸ್‍ಬಿ ಸಮುದಾಯದ ಗಣ್ಯರ ವಿಷಯದಲ್ಲಿ ಮಾತನಾಡುವಾಗ ಡಾ. ರಮೇಶ್ ಪೈಯವರು ಉದ್ಯಮಿ ಕುಡ್ಪಿ ಶ್ರೀನಿವಾಸ ಶೆಣೈ ಅವರ ಬಗ್ಗೆ ಮಾಹಿತಿ ನೀಡಿದರು. ಶಾರದಾ ಮಾತೆಯ ಸನ್ನಿಧಾನದಲ್ಲಿ ಅವಿರತವಾಗಿ ಶ್ರಮವಹಿಸಿದ ಸ್ವಯಂ ಸೇವಕರನ್ನು ಸನ್ಮಾನಿಸಲಾಯಿತು. ದಾಮೋದರ ಶೆಣೈ ವಂದಿಸಿದರು. ದೇವದಾಸ ಕಿಣಿ ನಿರೂಪಿಸಿದರು. ಕೊಂಕಣಿ ದಿನಾಚರಣೆಯ ಪ್ರಯುಕ್ತ ಬೆಳಗಿನಿಂದಲೇ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ ರಘನಂದನ ಭಟ್ ಅವರಿಂದ ಸಂತವಾಣಿ ಜರುಗಿತು. ವೈಷ್ಣವಿ ಶೆಣೈ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT