ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮಾಜಿ ಸಚಿವ ಮಾಲೂರು ಎಸ್.ಎನ್.ಕೃಷ್ಣಯ್ಯ ಶೆಟ್ಟಿ, ಬೆಂಗಳೂರಿನ ಉದ್ಯಮಿ ಜೈಪುನೀತ್ ಮತ್ತು ಕುಟುಂಬಸ್ಥರು ಸೇವಾರೂಪದಲ್ಲಿ ನಿರ್ಮಿಸಲಿರುವ ಆಶ್ಲೇಷ ಬಲಿ ಪೂಜಾ ಮಂದಿರದ ಕೆಲಸಗಳಿಗೆ ಫಲಕ ಅನಾವರಣದ ಮೂಲಕ ಚಾಲನೆ ನೀಡಲಾಯಿತು.

ಆಶ್ಲೇಷ ಮಂದಿರದ ಶಂಕು ಸ್ಥಾಪನೆಗೆ ತುಳಸಿ ತೋಟದಲ್ಲಿ ಪೂರ್ಣ ಸಿದ್ಧತೆ ನಡೆಸಲಾಗಿತ್ತು. ನಾಮ ಫಲಕವನ್ನು ಇರಿಸಿ ಭೂಮಿ ಪೂಜೆಯನ್ನೂ ನಡೆಸಲಾಗಿತ್ತು. ಆದರೆ, ಅಲ್ಲಿ ಸಚಿವರಿಂದ ಶಂಕುಸ್ಥಾಪನೆ ನಡೆಯಲಿಲ್ಲ. ನಾಮಫಲಕವನ್ನು ಆಡಳಿತ ಕಚೇರಿಗೆ ಸ್ಥಳಾಂತರಿಸಿ ಅಲ್ಲಿ ಅನಾವರಣ ಮಾಡಲಾಯಿತು.

ನಿತ್ಯಾನಂದ ಮುಂಡೋಡಿ ಅವರ ಅಧ್ಯಕ್ಷತೆಯ ಸಮಿತಿ ಸಂದರ್ಭ ಆಶ್ಲೇಷ ಮಂದಿರದ ಜಾಗದ ಕುರಿತು ಚರ್ಚೆ ನಡೆದು ತುಳಸಿ ತೋಟದಲ್ಲಿ ನಿರ್ಮಿಸುವುದಾಗಿ ಯೋಜನೆ ತಯಾರಿಸಲಾಗಿತ್ತು. ಬಳಿಕ ಮೋಹನ್ ರಾಮ್ ಸುಳ್ಳಿ ಅಧ್ಯಕ್ಷತೆಯ ಸಮಿತಿ ಸಂದರ್ಭ ಈ ಸೇವೆಗೆ ದಾನಿಗಳು ದೊರಕಿದ್ದು, ನಿರ್ಮಾಣದ ಸ್ಥಳವನ್ನು ಭೋಜನಶಾಲೆಯ ಹಿಂಭಾಗದಲ್ಲಿ ನಿಗದಿಗೊಳಿಸಿ ಮಾಲೂರು ಕೃಷ್ಣಯ್ಯ ಶೆಟ್ಟಿ ಶಂಕುಸ್ಥಾಪನೆ ನೆರವೇರಿಸಿದ್ದರು. ಈ ಸಂಬಂಧ ಭಾನುವಾರ ದೇಗುಲದ ಪ್ರಧಾನ ಅರ್ಚಕರು ಸಚಿವರನ್ನು ಸಂಪರ್ಕಿಸಿ ತುಳಸಿ ತೋಟದಲ್ಲಿ ಶಂಕುಸ್ಥಾಪನೆ ನಡೆಸುವುದಿದ್ದರೆ ಪ್ರಾಯಶ್ಚಿತ್ತ ನಡೆಸಬೇಕು ಎಂದು ತಿಳಿಸಿದ್ದರು ಎಂದು ಹೇಳಲಾಗುತ್ತಿದೆ. ಒಮ್ಮೆ ಮಂದಿರಕ್ಕೆ ಶಂಕುಸ್ಥಾಪನೆ ಮಾಡಿರುವುದರಿಂದ ಎರಡನೇ ಬಾರಿ ಶಂಕುಸ್ಥಾಪನೆ ಮಾಡದೆ ನಾಮಫಲಕ ಅನಾವರಣ ಮಾಡಲು ಸಚಿವರು ನಿರ್ಧರಿಸಿದರು ಎಂದು ತಿಳಿದುಬಂದಿದೆ.

ಸಮಾರಂಭದ ಕೊನೆಯಲ್ಲಿ ತುಳಸಿ ತೋಟಕ್ಕೆ ತೆರಳಿದ ಆಯುಕ್ತರು ಅಲ್ಲಿ ತೆಂಗಿನಕಾಯಿ ಒಡೆದರು. ಆ ಬಳಿಕ ಸಚಿವರೂ ಅಲ್ಲಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.