ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಷ್ಟ್ರೀಯ ಬಹುಭಾಷಾ ರಂಗೋತ್ಸವ ಸೆ.14ರಿಂದ 17ರ ವರೆಗೆ

Published : 13 ಸೆಪ್ಟೆಂಬರ್ 2024, 11:39 IST
Last Updated : 13 ಸೆಪ್ಟೆಂಬರ್ 2024, 11:39 IST
ಫಾಲೋ ಮಾಡಿ
Comments

ಮಂಗಳೂರು: ಇಲ್ಲಿಯ ಸಂತ ಅಲೋಶಿಯಸ್‌ (ಪರಿಗಣಿತ ವಿಶ್ವವಿದ್ಯಾಲಯ)ನ ರಂಗ ಅಧ್ಯಯನ ಕೇಂದ್ರದ ಸಹಭಾಗಿತ್ವದಲ್ಲಿ ಇದೇ 14ರಿಂದ 17ರ ವರೆಗೆ ಬಹುಭಾಷಾ ರಾಷ್ಟ್ರೀಯ ರಂಗೋತ್ಸವ ನಡೆಯಲಿದೆ.

ಮೊದಲ ದಿನ ಮೈಸೂರಿನ ಅನುಭೂತಿ ತಂಡದಿಂದ, ಶ್ರೀ ವಿದ್ಯಾ ಅವರು ಅಭಿನಯಿಸುವ ದೀಪಧಾರಿಣಿ ಎಂಬ ಕೊಂಕಣಿ ನಾಟಕ ಪ್ರದರ್ಶನಗೊಳ್ಳಲಿದೆ. ಈ ನಾಟಕೋತ್ಸವದಲ್ಲಿ ಕನ್ನಡ, ಕೊಂಕಣಿ, ಇಂಗ್ಲಿಷ್‌ ಹಾಗೂ ಮಕ್ಕಳ ನಾಟಕವೂ ಪ್ರದರ್ಶನಗೊಳ್ಳಲಿದ್ದು, ಎಲ್ಲಾ ನಾಟಕಗಳಿಗೂ ಉಚಿತ ಪ್ರವೇಶವಿದೆ.

ಎಲ್ಲಾ ನಾಟಕಗಳು ಸಂಜೆ 6.30ರಿಂದ ಸಂತ ಅಲೋಶಿಯಸ್ ವಿಶ್ವವಿದ್ಯಾಲಯದ ಆವರಣದೊಳಗಡೆ ಪ್ರದರ್ಶನಗೊಳ್ಳಲಿದೆ. ಈ ನಾಟಕೋತ್ಸವಕ್ಕೆ ರಂಗ ಅಧ್ಯಯನ ಕೇಂದ್ರ, ಕನ್ನಡ ವಿಭಾಗ, ಅಸ್ತಿತ್ವ ಮಂಗಳೂರು, ಅರೆಹೊಳೆ ಪ್ರತಿಷ್ಠಾನ, ಜೆಸಿಐ ಮಂಗಳೂರು ಲಾಲ್ ಭಾಗ್ ಇವರ ಸಹಭಾಗಿತ್ವವಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರದರ್ಶನಗೊಳ್ಳುವ ನಾಟಕಗಳ ವಿವರ:

14ರಂದು ನಾಟಕ: ದೀಪಧಾರಿಣಿ (ಕೊಂಕಣಿ), ತಂಡ: ಅನುಭೂತಿ, ಮೈಸೂರು. ನಿರ್ದೇಶನ: ಶ್ರೀಪಾದ ಭಟ್.

15ರಂದು ನಾಟಕ: ನೃತ್ಯಗಾಥಾ (ಕನ್ನಡ), ತಂಡ: ನೃತ್ಯನಿಕೇತನ ಕೊಡವೂರು ಉಡುಪಿ. ನಿರ್ದೇಶನ: ಶ್ರೀಪಾದ ಭಟ್.

16ರಂದು ನಾಟಕ: ಉರ್ಮಿಳಾ (ಇಂಗ್ಲಿಷ್‌), ತಂಡ: ಆದಿಶಕ್ತಿ, ಪುದುಚರಿ, ನಿರ್ದೇಶನ: ನಿಮ್ಮಿ ರಫಾಯಲ್.

17ರಂದು ನಾಟಕ: ಮರ ಮತ್ತು ಮನುಷ್ಯ (ಪಪೆಟ್ ಶೋ) ನಿರ್ದೇಶನ: ಶ್ರವಣ್ ಹೆಗ್ಗೋಡು., ಬ್ಲಾಕ್ ಬಲೂನ್ (ಕನ್ನಡ) ನಿರ್ದೇಶನ: ಅರುಣ್ ಲಾಲ್, ಕೇರಳ, ತಂಡ: ನಿರ್ದಿಗಂತ ಮೈಸೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT