ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರತ್ಕಲ್ | ಸಂಚಾರಿ ಪೊಲೀಸ್ ಠಾಣೆಗೆ ನೂತನ ಕಟ್ಟಡ

ಕಮಿಷನರ್ ಕುಲದೀಪ್‌ ಕುಮಾರ್‌ ಜೈನ್‌ ಅವರಿಂದ ಉದ್ಘಾಟನೆ
Last Updated 21 ಮಾರ್ಚ್ 2023, 5:10 IST
ಅಕ್ಷರ ಗಾತ್ರ

ಸುರತ್ಕಲ್: ಬೈಕಂಪಾಡಿಯ ಎಪಿಎಂಸಿ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಮಂಗಳೂರು ಉತ್ತರ ಸಂಚಾರ ಪೊಲೀಸ್‌ ಠಾಣೆಯ ನೂತನ ಕಚೇರಿ ಸೋಮವಾರ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿ ಉದ್ಘಾಟನೆಗೊಂಡಿತು.

ನೂತನ ಪೊಲೀಸ್‌ ಠಾಣೆಯನ್ನು ಮಂಗಳೂರು ನಗರ ಪೊಲೀಸ್‌ ಕಮಿಷನರ್ ಕುಲದೀಪ್‌ ಕುಮಾರ್‌ ಜೈನ್‌ ಉದ್ಘಾಟಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ. ಭರತ್‌ ಶೆಟ್ಟಿ ವೈ ಮಾತನಾಡಿ, ‘ಇಲ್ಲಿ ಸಾರ್ವಜನಿಕರ ಕಷ್ಟಗಳಿಗೆ ಸ್ಪಂದಿಸುವ ಕೆಲಸವಾಗಬೇಕು’ ಎಂದರು.

ಕಟ್ಟಡದ ಗುತ್ತಿಗೆದಾರ ಜನಾರ್ದನ ಬಾಬು, ಎಂಜಿನಿಯರ್‌ ಸನ್ನೇಗೌಡ, ಪೊಲೀಸ್‌ ಹೌಸಿಂಗ್‌ ಕಾರ್ಪೊರೇಷನ್‌ ಅಧಿಕಾರಿ ಪ್ರಜ್ಞಾ ಆನಂದ್‌, ಎಂಜಿನಿ ಯರ್‌ ಸಂಜಯ್‌ ಅವರನ್ನು ಸನ್ಮಾನಿಸ ಲಾಯಿತು. ಡಿಸಿಪಿ ಅನ್ಶುಕುಮಾರ್‌, ದಿನೇಶ್‌ ಇದ್ದರು.

ಉತ್ತರ ಸಂಚಾರ ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷಕ ಸುರೇಶ್‌ ಸ್ವಾಗತಿಸಿದರು. ಎಸಿಪಿ ಗೀತಾ ಕುಲಕರ್ಣಿ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT