ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರಿನ ಪಿಎಫ್ಐ, ಎಸ್​ಡಿಪಿಐ ಜಿಲ್ಲಾ ಕಚೇರಿಗಳ ಮೇಲೆ ಎನ್ಐಎ ಅಧಿಕಾರಿಗಳ ದಾಳಿ

Last Updated 22 ಸೆಪ್ಟೆಂಬರ್ 2022, 3:43 IST
ಅಕ್ಷರ ಗಾತ್ರ

ಮಂಗಳೂರು: ನಗರದಲ್ಲಿನ ಪಿಎಫ್ಐ, ಎಸ್​ಡಿಪಿಐ ಜಿಲ್ಲಾ ಘಟಕದ ಕಚೇರಿಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​​ಐಎ) ಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬೆಳಗಿನಜಾವ 3.30 ರ ಸುಮಾರಿಗೆ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿ ಇರುವ ಕಚೇರಿಗಳು ಸೇರಿದಂತೆ ನಗರದ 8 ಕಡೆ ಈ ಸಂಘಟನೆಗಳ ಮುಖಂಡರ ಮನೆಗಳಲ್ಲಿ ಶೋಧ ನಡೆಯುತ್ತಿದೆ ಎನ್ನಲಾಗಿದೆ.

ಪಿಎಫ್ಐ, ಎಸ್​ಡಿಪಿಐ ಕಚೇರಿ ಇರುವ ನೆಲ್ಲಿಕಾಯಿ ರಸ್ತೆಯ ಎರಡು ಬದಿಗಳಲ್ಲೂ ಸಿಆರ್​ಪಿಎಫ್ ಪಡೆಗಳ ಬಂದೋಬಸ್ತ್​ ಹಾಕಲಾಗಿದೆ. ಎನ್​ಐಎ ಅಧಿಕಾರಿಗಳು ಕಚೇರಿಯೊಳಗೆ ಪರಿಶೀಲನೆ ಮುಂದುವರೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT