ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕಮುಖ ಸಂಚಾರ ವ್ಯವಸ್ಥೆ: ಸಾರ್ವಜನಿಕರ ಅಭಿಪ್ರಾಯ, ಸಲಹೆ ಆಹ್ವಾನ

ಕ್ಲಾಕ್‌ ಟವರ್‌– ಎ.ಬಿ.ಶೆಟ್ಟಿ ವೃತ್ತ– ಹ್ಯಾಮಿಲ್ಟನ್‌ ವೃತ್ತ–ರಾವ್‌ ಆ್ಯಂಡ್ ವೃತ್ತ
Last Updated 26 ಆಗಸ್ಟ್ 2022, 14:31 IST
ಅಕ್ಷರ ಗಾತ್ರ

ಮಂಗಳೂರು: ನಗರದ ಕ್ಲಾಕ್‌ ಟವರ್‌– ಎ.ಬಿ.ಶೆಟ್ಟಿ ವೃತ್ತ– ಹ್ಯಾಮಿಲ್ಟರ್‌ ವೃತ್ತ– ರಾವ್‌ ಆ್ಯಂಡ್ ರಾವ್‌ ವೃತ್ತಗಳಲ್ಲಿ ಅಭಿವೃದ್ಧಿಪಡಿಸಿರುವ ಜಂಕ್ಷನ್‌ಗಳ ಬಗ್ಗೆ ಹಾಗೂ ಈ ಮಾರ್ಗದಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿರುವ ವಾಹನಗಳ ಏಕಮುಖ ಸಂಚಾರ ವ್ಯವಸ್ಥೆಯ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯ ಹಾಗೂ ಸಲಹೆಗಳನ್ನು ಆಹ್ವಾನಿಸಲಾಗಿದೆ.

ನಗರದ ಕ್ಲಾಕ್‌ ಟವರ್‌– ಎ.ಬಿ.ಶೆಟ್ಟಿ ವೃತ್ತ– ಹ್ಯಾಮಿಲ್ಟರ್‌ ವೃತ್ತ– ರಾವ್‌ ಆ್ಯಂಡ್ ವೃತ್ತ– ಕ್ಲಾಕ್‌ ಟವರ್‌ ಮಾರ್ಗವು ಪ್ರಮುಖ ಸರ್ಕಾರಿ ಕಚೇರಿಗಳಿಗೆ ಹಾಗೂ ವಾಣಿಜ್ಯ ಕೇಂದ್ರಗಳಿಗೆ ಸಂಪರ್ಕಿಸುತ್ತದೆ. ನೆಹರೂ ಮೈದಾನ, ಕುದ್ಮುಲ್‌ ರಂಗರಾವ್‌ ಪುರಭವನ, ಸರ್ವಿಸ್‌ ಬಸ್‌ ನಿಲ್ದಾಣಗಳಿಗೆ ಸಂಪರ್ಕಿಸುವ ಈ ಮಾರ್ಗದಲ್ಲಿ ಅತ್ಯಧಿಕ ವಾಹನ ದಟ್ಟಣೆ ನಿಯಂತ್ರಿಸಲು ವಾಹನಗಳ ಏಕಮುಖ ಸಂಚಾರಕ್ಕೆ ಅನುವಾಗುವಂತೆ ವೃತ್ತಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಮಾರ್ಗದಲ್ಲಿ ವಾಹನಗಳ ಏಕಮುಖ ಸಂಚಾರ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸುವ ಬಗ್ಗೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅಧ್ಯಕ್ಷತೆಯಲ್ಲಿ ಮೇಯರ್‌ ಪ್ರೇಮಾನಂದ ಶೆಟ್ಟಿ, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್‌ ಅವರ ಉಪಸ್ಥಿತಿಯಲ್ಲಿ ಆ. 5ರಂದು ನಡೆದಿದ್ದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು.

ಈ ಏಕಮುಖ ಸಂಚಾರ ವ್ಯವಸ್ಥೆ ಬಗ್ಗೆ ಹಾಗೂ ಇಲ್ಲಿ ಅಭಿವೃದ್ಧಿಪಡಿಸಲಾಗಿರುವ ಜಂಕ್ಷನ್‌ಗಳ ಬಗ್ಗೆ ಸಾರ್ವಜನಿಕರು ತಮ್ಮ ಅಭಿಪ್ರಾಯ ಅಥವಾ ಸಲಹೆಗಳನ್ನು ಮಂಗಳೂರು ಮಹಾನಗರ ಪಾಲಿಕೆ (www.mangalurucity.mrc.gov.in) ಅಥವಾ ಮಂಗಳೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ನ (www.mangalurusmartcity.net) ಜಾಲತಾಣ, ಫೇಸ್‌ಬುಕ್‌, ಟ್ವಿಟರ್‌ ಅತವಾ ಇನ್‌ಸ್ಟಾಗ್ರಾಂ ಖಾತೆಗಳಲ್ಲಿ ಲಭ್ಯ ಇರುವ ಗೂಗಲ್‌ ನಮೂನೆಯ ಕೊಂಡಿ ಮೂಲಕ ಸೆ. 4ರ ಒಳಗಾಗಿ ಸಲ್ಲಿಸಬಹುದು ಎಂದು ಪಾಲಿಕೆಯ ಆಯುಕ್ತ ಅಕ್ಷಯ್‌ ಶ್ರೀಧರ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT