ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಕ್ಷಣದಿಂದ ಆದರ್ಶ ವ್ಯಕ್ತಿತ್ವ ನಿರ್ಮಾಣ: ಉಮೇಶ ರಾವ್ ಎಕ್ಕಾರು

Published : 9 ಸೆಪ್ಟೆಂಬರ್ 2024, 5:16 IST
Last Updated : 9 ಸೆಪ್ಟೆಂಬರ್ 2024, 5:16 IST
ಫಾಲೋ ಮಾಡಿ
Comments

ಮಂಗಳೂರು: ‘ವಿದ್ಯಾರ್ಥಿಗಳಲ್ಲಿ ಆದರ್ಶ ವ್ಯಕ್ತಿತ್ವ ನಿರ್ಮಿಸಲು ಶಿಕ್ಷಣದಿಂದ ಸಾಧ್ಯ’ ಎಂದು ಕಟೀಲು ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಉಮೇಶ ರಾವ್ ಎಕ್ಕಾರು ಹೇಳಿದರು.

ಐಕಳದ ಪೊಂಪೈ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಖಾತರಿ ಕೋಶ (ಐಕ್ಯುಎಸಿ), ವಿದ್ಯಾರ್ಥಿ ಕ್ಷೇಮಪಾಲನ ಸಮಿತಿ, ಎನ್ಎಸ್ಎಸ್ ಸಹಯೋಗದಲ್ಲಿ ಈಚೆಗೆ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ರೊಟೇರಿಯನ್ ದೇವಿದಾಸ್ ಶೆಟ್ಟಿ, ‘ಮಾತನಾಡಿ ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯ’ ಎಂದರು.

ಕಾಲೇಜಿನ ಪ್ರಾಂಶುಪಾಲ ಪುರುಷೋತ್ತಮ ಕೆ.ವಿ ಅಧ್ಯಕ್ಷತೆ  ವಹಿಸಿದ್ದರು. ಇತಿಹಾಸ ಪ್ರಾಧ್ಯಾಪಕಿ  ಆಶಿತಾ ಜೆ. ಸನ್ಮಾನ ಪತ್ರ ವಾಚಿಸಿದರು.  ವಿದ್ಯಾರ್ಥಿನಿ ಅಮೃತಾ ಕಾರ್ಯಕ್ರಮ ನಿರೂಪಿಸಿದರು.  ವಿದ್ಯಾರ್ಥಿನಿ ಧನ್ಯಶ್ರೀ ಸ್ವಾಗತಿಸಿದರು.  ವಿದ್ಯಾರ್ಥಿ ಶಶಿಧರ್  ಧನ್ಯವಾದ ಸಲ್ಲಿಸಿದರು. ವಿದ್ಯಾರ್ಥಿ ಕ್ಷೇಮಪಾಲನ ಸಮಿತಿಯ ಸಂಯೋಜನಾಧಿಕಾರಿ ವಿಕ್ಟರ್ ವಾಜ್, ಐ.ಕ್ಯು ಎ.ಸಿ ಸಂಯೋಜಕ ಗುಣಕರ್ ಎಸ್., ಎನ್ ‌ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ಪೃಥ್ವಿರಾಜ್. ಬಿ, ಎನ್ಎಸ್ಎಸ್ ಸಹ ಕಾರ್ಯಕ್ರಮ ಅಧಿಕಾರಿ ಆಶಾಲತಾ ಕೆ.ಜಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT