ಶನಿವಾರ, ಜೂನ್ 19, 2021
21 °C

ಚಿನ್ನಾಭರಣ ಕದ್ದ ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಒಬ್ಬಂಟಿ ವೃದ್ಧೆಯ ಚಿನ್ನಾಭರಣ ದೋಚಿದ್ದ ರಿಕ್ಷಾ ಚಾಲಕ ಪ್ರವೀಣ್‌ನನ್ನು ಬಂಧಿಸಿರುವ ಉರ್ವ ಠಾಣೆ ಪೊಲೀಸರು, ಆರೋಪಿಯಿಂದ ₹4.32 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಚಿಲಿಂಬಿ ಪಂಚಲಿಂಗೇಶ್ವರ ದೇವಸ್ಥಾನ ಬಳಿ ವಾಸವಾಗಿರುವ ವೃದ್ಧೆ ಫಿಲೋಮಿನಾ ಸಲ್ಡಾನ ಅವರಿಗೆ ಸಹಾಯ ಮಾಡುತ್ತಿದ್ದ ರಿಕ್ಷಾ ಚಾಲಕ ಪ್ರವೀಣ್‌, ಚಿನ್ನಾಭರಣ ಕಳವು ಮಾಡಿದ್ದ. ಈ ಬಗ್ಗೆ ಜೂನ್‌ 6 ರಂದು ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ನಡೆಸಿದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದು, ಫಳ್ನೀರ್‌ನ ಬ್ಯಾಂಕ್‌ನಲ್ಲಿ ಅಡಮಾನ ಇರಿಸಿದ್ದ ಹಾಗೂ ಆತನ ವಶದಲ್ಲಿದ್ದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಉರ್ವ ಠಾಣೆ ಇನ್‌ಸ್ಪೆಕ್ಟರ್‌ ಮಹಮ್ಮದ್ ಶರೀಫ್‌, ಸಬ್ ಇನ್‌ಸ್ಪೆಕ್ಟರ್‌ ಶ್ರೀಕಲಾ, ಎಎಸ್‌ಐ ಬಾಲಕೃಷ್ಣ, ಸಿಬ್ಬಂದಿ ಪ್ರಕಾಶ್‌, ಬಸವರಾಜ ಬಿರಾದಾರ ಅವರ ತಂಡ ಈ ಪ್ರಕರಣ ಭೇದಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.