ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SSLC Exam Tips | ಸಮಾಜ ವಿಜ್ಞಾನ: ಯೋಜಿತ ಓದು ಮುಖ್ಯ

Published 15 ಮಾರ್ಚ್ 2024, 11:11 IST
Last Updated 15 ಮಾರ್ಚ್ 2024, 11:11 IST
ಅಕ್ಷರ ಗಾತ್ರ

ಸಮಾಜ ವಿಜ್ಞಾನ ವಿಷಯದಲ್ಲಿ 33 ಪಾಠಗಳಿದ್ದು, ಅವುಗಳನ್ನು ಯೋಜನೆ ಪ್ರಕಾರ ಓದಿಕೊಂಡರೆ ಸುಲಭವಾಗಿ ಅಂಕ ಗಳಿಸಬಹುದು. 3 ಮತ್ತು 4 ಅಂಕ ಬರುವ ಪ್ರಶ್ನೆಗಳು ಯಾವುದೆಂದು ಮೊದಲು ತಿಳಿದುಕೊಳ್ಳಬೇಕು. ಅರ್ಥಶಾಸ್ತ್ರದಲ್ಲಿ ಅರ್ಥ ವ್ಯವಸ್ಥೆ ಮತ್ತು ಸರ್ಕಾರ, ಗ್ರಾಮೀಣಾಭಿವೃದ್ಧಿ, ವ್ಯವಹಾರ ಅಧ್ಯಯನದಲ್ಲಿ ಬ್ಯಾಂಕ್ ಫಾಠಗಳು, ಭೂಗೋಳ ವಿಜ್ಞಾನದಲ್ಲಿ ಮಣ್ಣು, ಅರಣ್ಯ, ಅರಣ್ಯ ಸಂರಕ್ಷಣೆ, ಭೂ ಬಳಕೆ ವಿಧಾನ, ಕೃಷಿ ಋತುಗಳು ಹೀಗೆ ಪ್ರಮುಖ ವಿಷಯಗಳ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. 6ರಿಂದ 8 ಅಂಶಗಳ ಉತ್ತರ ಬರೆದರೆ ಉತ್ತಮ. ಭೂಗೋಳದಿಂದ ನಕಾಶೆಯನ್ನು ನಿರೀಕ್ಷಿಸಬಹುದು. ಸಮಾಜ ವಿಜ್ಞಾನ ಪರೀಕ್ಷೆಗೆ ಒಂದೂವರೆ ದಿನ ಮಾತ್ರ ಕಾಲಾವಕಾಶ ಇದ್ದು, ಮೊದಲೇ ಓದಿ ಪ್ರಮುಖ ಅಂಶಗಳ ಅಂಡರ್‌ಲೈನ್ ಮಾಡಿಟ್ಟುಕೊಂಡರೆ, ಪರೀಕ್ಷೆ ಮುನ್ನಾದಿನ ಅವನ್ನು ಓದಿ ಸಮಯ ಉಳಿಸಿಕೊಳ್ಳಬಹುದು. ಒಂದು ಅಂಕದ ಪ್ರಶ್ನೆಗೆ ಪಠ್ಯಪುಸ್ತಕವನ್ನೇ ಹೆಚ್ಚು ಅವಲಂಬಿಸಬೇಕು ಎನ್ನುತ್ತಾರೆ ಸಮಾಜ ವಿಜ್ಞಾನ ಶಿಕ್ಷಕ ವಿಶಾಂತ್‌ ಡಿಸೋಜ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT