ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವೀಣ್‌ ನೆಟ್ಟಾರು ಹತ್ಯೆ: ಆರೋಪಿಗಳಿಗೆ ಮತ್ತೊಂದು ನೋಟಿಸ್‌

Published 16 ಜುಲೈ 2023, 7:19 IST
Last Updated 16 ಜುಲೈ 2023, 7:19 IST
ಅಕ್ಷರ ಗಾತ್ರ

ಸುಳ್ಯ: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆ‌ಮರೆಸಿಕೊಂಡಿರುವ ಆರೋಪಿಗಳು  ಆ. 18ರ ಒಳಗಾಗಿ ಶರಣಾಗಬೇಕು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಗಡುವು ವಿಧಿಸಿದ್ದು, ಆರೋಪಿಗಳ ಮನೆಗಳಿಗೆ ನೋಟಿಸ್‌ ಅಂಟಿಸಿದ್ದಾರೆ. 

ತಲೆ ಮರೆಸಿಕೊಂಡಿರುವ ಆರೋಪಿಗಳ ಮನೆಗೆ ಅಂಟಿಸಿದ ತಿಂಗಳ ಈಚೆಗೆ ಅಂಟಿಸಿದ ಎರಡನೇ ನೋಟಿಸ್‌ ಇದಾಗಿದೆ. ಪ್ರಕರಣದ ಆರೋಪಿಗಳಾದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕು ಬೆಳ್ಳಾರೆ ಗ್ರಾಮದ ಮೊಹಮ್ಮದ್‌ ಮುಸ್ತಾಫ ಎಸ್‌. ಹಾಗೂ ಸುಳ್ಯ ಕಲ್ಲುಮುಟ್ಟು ಮನೆಯ ಉಮ್ಮರ್‌ ಫಾರೂಕ್‌ ತಲೆ ಮರೆಸಿಕೊಂಡಿದ್ದು, ಅವರ ಮನೆಗಳಿಗೆ ಎನ್‌ಐಎ ಅಧಿಕಾರಿಗಳು 2023ರ ಜೂನ್‌ ತಿಂಗಳಿನಲ್ಲೂ ನೋಟಿಸಿ  ಅಂಟಿಸಿದ್ದರು. ಜೂನ್‌ 30ರ ಒಳಗೆ ಶರಣಾಗುವಂತೆ ಗಡುವು ವಿಧಿಸಿದ್ದರು. ಆರೋಪಿಗಳ ಸುಳಿವು ಕೊಟ್ಟಲ್ಲಿ ನಗದು ಬಹುಮಾನ ನೀಡಲಾಗುವುದು ಎಂದು ಸುಳ್ಯ ಹಾಗೂ ಬೆಳ್ಳಾರೆ ಪಟ್ಟಣಗಳಲ್ಲಿ ಧ್ವನಿವರ್ಧಕ ಬಳಸಿಯೂ ಪ್ರಚಾರ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT