ಮಂಗಳೂರು: ‘ಸರ್ಕಾರಿ ನೌಕರಿ ಇದ್ದರೂ ನನಗೆ ಪತ್ರಿಕೆಗಳ ಸೆಳೆತ. ಮಗನ ಹೆಸರಿನಲ್ಲಿ ಪ್ರಾರಂಭವಾದ ಪತ್ರಿಕೆಗಳ ಏಜೆನ್ಸಿ ನನಗೆ ಬದುಕು ಕೊಟ್ಟಿತು, ಜೊತೆಗೆ, ಖುಷಿಯನ್ನೂ ಕೊಟ್ಟಿತು..’

ಪತ್ರಿಕಾ ದಿನಾಚರಣೆ ಅಂಗವಾಗಿ ಕಾರ್ಯನಿರತ ಪತ್ರಕರ್ತರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕವು ಬುಧವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಪತ್ರಿಕಾ ವಿತರಕ 79ರ ಹರೆಯದ ರಘುರಾಂ ಕೆ ಅವರ ಮಾತುಗಳಿವು.

‘1975ರಲ್ಲಿ ಪಡೆದ ಪತ್ರಿಕಾ ಏಜೆನ್ಸಿಗೆ 50 ವರ್ಷಗಳು ಕಳೆದಿವೆ. ಆಗ ನನಗೆ ಸರ್ಕಾರಿ ನೌಕರಿ ಇತ್ತು. ಆದರೆ, ಸರ್ಕಾರಿ ನೌಕರರಿಗೆ ಸಂಬಳ ಕಡಿಮೆ ಇತ್ತು. ಸಂಬಳದಿಂದ ಕುಟುಂಬ ನಡೆಸಲು ಸಾಧ್ಯವಾಗದಾಗ, ಜೀವನಕ್ಕೆ ದಾರಿ ತೋರಿದ್ದು ಪತ್ರಿಕೆ. ಹೀಗಾಗಿ, ಅಂದಿನಿಂದ ಇಂದಿನ ವರೆಗೂ ಪತ್ರಿಕೆ ವಿತರಣೆ ಕೆಲಸವನ್ನು ಪ್ರೀತಿಯಿಂದ ಮಾಡುತ್ತಿದ್ದೇನೆ. ಮಕ್ಕಳೆಲ್ಲ ಈಗ ಸ್ವತಂತ್ರರಾಗಿ ದುಡಿಯುತ್ತಿದ್ದಾರೆ. ಆದರೆ, ನಮ್ಮ ಕುಟುಂಬ ಪತ್ರಿಕೆ ವಿತರಣೆ ಕಾರ್ಯ ಬಿಟ್ಟಿಲ್ಲ’ ಎನ್ನುವಾಗ ಅವರಿಗೆ ಹೆಮ್ಮೆಯ ಭಾವ.

ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್ ಅವರು, ‘ಮಂಗಳೂರು ಸಮಾಚಾರ’ ಕನ್ನಡದ ಮೊದಲ ಪತ್ರಿಕೆ ಪ್ರಾರಂಭಿಸಿದ ಹರ್ಮನ್ ಮೋಗ್ಲಿಂಗ್ ಅವರ ಪ್ರತಿಮೆಯನ್ನು ಜಿಲ್ಲಾಧಿಕಾರಿ ಕಚೇರಿ ಅಥವಾ ಮಹಾನಗರ ಪಾಲಿಕೆ ಕಚೇರಿ ಎದುರು ಪ್ರತಿಷ್ಠಾಪಿಸಬೇಕು. ಒಂದು ರಸ್ತೆಗೆ ಅವರ ಹೆಸರು ಇಡಬೇಕು ಎಂದರು.

ಪತ್ರಕರ್ತ ವಾಲ್ಟರ್ ನಂದಳಿಕೆ ‘ಮಾಧ್ಯಮದ ಸವಾಲುಗಳು’ ಕುರಿತು ಉಪನ್ಯಾಸ ನೀಡಿದರು. ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಖಾದರ್ ಶಾ, ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ, ಪ್ರೆಸ್ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಇದ್ದರು. ವಿಜಯ್ ಕೋಟ್ಯಾನ್ ನಿರೂಪಿಸಿದರು. ಜಿತೇಂದ್ರ ಕುಂದೇಶ್ವರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.